For Quick Alerts
  ALLOW NOTIFICATIONS  
  For Daily Alerts

  ಐಶೂ ಮಗು ನೋಡಿ ಉದ್ಗರಿಸಿದ ಓಪ್ರಾ ವಿನ್ ಫ್ರೇ

  |

  ಅಮೇರಿಕಾ ಮಾಧ್ಯಮದ ಐಕಾನ್, ಟಿವಿ ನಿರೂಪಕಿ ಓಪ್ರಾ ವಿನ್ ಫ್ರೇ ಭಾರತಕ್ಕೆ ಬಂದಿದ್ದಾರೆ. ಮುಂಬೈನ ಬಚ್ಚನ್ ಕುಟುಂಬವನ್ನು ಭೇಟಿ ಮಾಡಿರುವ ಓಪ್ರಾ ವಿನ್ ಫ್ರೇ, ಬಚ್ಚನ್ ಕುಟುಂಬದ ಜೊತೆ ಸಾಕಷ್ಟು ಕಾಲ ಕಳೆದಿದ್ದಾರೆ. ಈ ವೇಳೆ ಐಶ್ವರ್ಯ ರೈ ಬಚ್ಚನ್ ನಗು ನೋಡಿ "ಮಗು ತುಂಬಾ ಮುದ್ದಾಗಿ ಮನಮೋಹಕವಾಗಿದೆ" ಎಂದಿದ್ದಾರೆ.

  ಬಚ್ಚನ್ ಕುಟುಂಬಕ್ಕೂ ಓಪ್ರಾ ವಿನ್ ಫ್ರೇಗೂ ತುಂಬಾ ಹಳೆಯ ಹಾಗೂ ಗಟ್ಟಿಯಾದ ನಂಟು. ಬಚ್ಚನ್ ಕುಟುಂಬ ಕೂಡ ಅಮೇರಿಕಾಕ್ಕೆ ಹೋದರೆ ಓಪ್ರಾ ಭೇಟಿಯಾಗದೇ ಬರುವುದಿಲ್ಲ. ಅವರೂ ಹಾಗೇ, ಭಾರತಕ್ಕೆ ಬಂದರೆ ಬಚ್ಚನ್ ಕುಟುಂಬದ ಭೇಟಿ ಇದ್ದದ್ದೇ. ಈ ಬಾರಿಯ ಭೇಟಿಯ ವಿಶೇಷವೆಂದರೆ ಜಗತ್ತೇ ನೋಡಲು ಕಾತರದಿಂದಿರುವ ಐಶೂ ಮಗುವನ್ನು ಓಪ್ರಾ ನೋಡಿದ್ದು.

  ಅಮಿತಾಬ್ ಮಗುವನ್ನು ನೋಡಿದ ಕೆಲವೇ ಅದೃಷ್ಟವಂತರಲ್ಲಿ ಓಪ್ರಾ ವಿನ್ ಫ್ರೇ ಕೂಡ ಒಬ್ಬರು. ಅವರು ಬಂದಾಗ ಐಶೂ ಮಗು ನಿದ್ದೆಗೆ ಜಾರಿತ್ತಂತೆ. "ಕಣ್ಣು ಮುಚ್ಚಿದ್ದರೂ ಮಗು ತುಂಬಾ ಸುಂದರವಾಗಿ ಕಾಣುತ್ತಿತ್ತು" ಎಂದಿದ್ದಾರೆ ಓಪ್ರಾ. ಅಂದಮೇಲೆ ಮಗು ಅದೆಷ್ಟು ಮುದ್ದಾಗಿರಬಹುದು ಊಹಿಸಿ... (ಏಜೆನ್ಸೀಸ್)

  English summary
  Though Oprah Winfrey has been extremely tight lipped about her visit to Aishwarya Rai and the Bachchan household, she revealed that Aishwaryas baby is gorgeous.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X