»   » ಹೆಸರುಘಟ್ಟದಲ್ಲಿ ಬಣ್ಣಬಣ್ಣದ ಲೋಕ

ಹೆಸರುಘಟ್ಟದಲ್ಲಿ ಬಣ್ಣಬಣ್ಣದ ಲೋಕ

Subscribe to Filmibeat Kannada

ಅಂದು ಹೆಸರುಘಟ್ಟದ ಬಳಿಯಿರುವ ಕೃಷ್ಣ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಡಗರ ಮನೆ ಮಾಡಿತ್ತು. ಬಣ್ಣದ ಲೋಕದ ತಾರೆಗಳೆಲ್ಲಾ ಅಲ್ಲಿ ವಿಹರಿಸುತ್ತಿದರು. ಚಿತ್ರೀಕರಣ ವಿಕ್ಷಣೆಗೆ ಜನರ ಸಂತೆ ಅಲ್ಲಿ ನೆರೆದಿತ್ತು. ಇಂತಹ ಸಂಭ್ರಮದ ವಾತಾವರಣದಲ್ಲಿ 'ಬಣ್ಣಬಣ್ಣದ ಲೋಕ' ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿತು.

ನಾಯಕನಾಗಿ ಅಭಿನಯಿಸುತ್ತಿರುವ ರಾಂಪ್ರಸಾದ್ ಚಿತ್ರದ ನಿರ್ದೇಶಕ ಕೂಡ. ನಿರ್ದೇಶನದ ನಿರ್ವಹಣೆಯೊಂದಿಗೆ ಪ್ರಸಾದ್ ಈ ಚಿತ್ರದಿಂದ ಗೀತೆರಚನೆಕಾರರಾಗೂ ಪರಿಚಯವಾಗುತ್ತಿದ್ದಾರೆ. ಇವರ ರಚನೆಯ 'ಅಂಕು ಡೊಂಕು ತೋರಿದರೆ ವೈಯ್ಯಾರಿ-ಸೋಲುವೆನೆ ಚಿನ್ನ ಇವನು ಮಯೂರಿ' ಎಂಬ ಗೀತೆಗೆ ರಾಂಪ್ರಸಾದ್ ಅವರೊಂದಿಗೆ ಹರ್ಷ ಹಾಗೂ ಮೇಘನ ಗೌಡ ಹೆಜ್ಜೆ ಹಾಕಿದರು. ರಾಮು ನೃತ್ಯ ಸಂಯೋಜಿಸಿದರು.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಶಶಿಕಲಾ ಹಾಗೂ ನರಸಿಂಹ ಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಂಪ್ರಸಾದ್ ನೂತನ ಪ್ರತಿಭೆ. ನಟನೆಗಷ್ಟೇ ಸೀಮಿತರಾಗದ ಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ವಿ.ಚಂದ್ರಶೇಖರ್ ಛಾಯಾಗ್ರಹಣ, ಡಿ.ಥಾಮಸ್ ಸಂಗೀತ, ಬಸವರಾಜ್ ಸಂಕಲನ, ಅಶೋಕ್ ಸಾಹಸ, ಅನಿಲ್‌ಕೃಷ್ಣ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಶ್ರಾವಣಿ, ರೂಪ, ವಿನುಷ, ಬ್ಯಾಂಕ್ ಜನಾರ್ಧನ್, ಸಂತೋಷ್ ಉಪ್ಪಿನ್, ರೇಖಾ ವಿ ಕುಮಾರ್, ಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada