ಏಳುಬೀಳುಗಳ ನಡುವೆ ಗೋಲ್ಡನ್ ಸ್ಟಾರ್ ಗಣೇಶ್

ಈ ನಡುವೆ ಗಣೇಶ್ ವೃತ್ತಿಜೀವನ ಹಾವು ಏಣಿ ಆಟವಾಗಿದೆ. ಬರಲಿರುವ ಎರಡು ಚಿತ್ರಗಳ ಪೈಕಿ, ರೋಮಿಯೋದಲ್ಲಿ ಭಾವನಾ ಹಾಗೂ ಮುಂಜಾನೆ ಚಿತ್ರದಲ್ಲಿ ಮಂಜರಿ ಗಣೇಶ್ ಗೆ ಜೊತೆಯಾಗಿದ್ದಾರೆ. ರೋಮಿಯೋ ಫೆಬ್ರವರಿಯಲ್ಲಿ ಹಾಗೂ ಮುಂಜಾನೆ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ವದಂತಿ ಇದೆ. ಈ ಎರಡೂ ಚಿತ್ರಗಳ ಮೇಲೆ ಸ್ವತಃ ಗಣೇಶ್ ಅವರಿಗೆ ಹೆಚ್ಚಿನ ನಿರೀಕ್ಷೆಯೇನೂ ಇಲ್ಲ, ಅಭಿಮಾನಿಗಳಿಗೆ ಇದೆ ಅಷ್ಟೆ.
ಶೈಲೂ ಚಿತ್ರಕ್ಕಿಂತ ಮೊದಲು ಸಂಪೂರ್ಣ ನೆಲಕಚ್ಚಿದ್ದ ಗೋಲ್ಡನ್ ಸ್ಟಾರ್ ಗಣೇಶ್ ವೃತ್ತಿಜೀವನ ಈಗ ನಿಧಾನವಾಗಿ ಮೇಲೇರತೊಡಗಿದೆ. ಈ ಎರಡು ಚಿತ್ರಗಳ ನಂತರ ಗಣೇಶ್ ಹಣೆಬರಹ ಬದಲಾದರೂ ಆಗಬಹುದು. ಇವೆರಡರ ಹೊರತಾಗಿಯೂ ಗಣೇಶ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಆದರೆ ಅದ್ಯಾಕೋ ವೃತ್ತಿಜೀವನ ಏಳುಬೀಳುಗಳ ನಡುವೆ ಸಾಗುತ್ತಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Golden Star Ganesh Movies are in line to release. Romeo and Munjane movie has to Release soon.


Click it and Unblock the Notifications











