ಧನುಷ್, ಮಲ್ಲಿಕಾಗೆ ಹಾಟೆಸ್ಟ್ ವೆಜಿಟೇರಿಯನ್ ಪ್ರಶಸ್ತಿ
"ಕೊಲವೆರಿ ಡಿ..." ಹಾಡಿನ ಗುಂಗಿನಲ್ಲಿ ತೇಲುತ್ತಿರುವ ನಟ ಧನುಷ್‌ಗೆ ಮತ್ತೊಂದು ಪ್ರಶಸ್ತಿ ಒಲಿದಿದೆ. ಸೆಕ್ಸಿ ತಾರೆ ಎಂದೇ ಖ್ಯಾತರಾಗಿರುವ ಮಲ್ಲಿಕಾ ಶೆರಾವತ್ ಹಾಗೂ ಧನುಷ್ ಒಟ್ಟಿಗೆ ಹಾಟೆಸ್ಟ್ ವೆಜಿಟೇರಿಯನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾಣಿ ದಯಾ ಸಂಘ (PETA) ನಡೆಸಿದ ಚುನಾವಣೆಯಲ್ಲಿ ಇವರಿಬ್ಬರಿಗೂ ಈ ಪ್ರಶಸ್ತಿ ಸಿಕ್ಕಿದೆ.
ಇತರೆ ಶಾಕಾಹಾರಿ ನಟರಾದ ವಿವೇಕ್ ಒಬೆರಾಯ್, ವಿದ್ಯಾ ಬಾಲನ್, ಸೋನು ಸೂದ್, ಶಾಹಿದ್ ಕಪೂರ್, ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ ಹಾಗೂ ಕರೀನಾ ಕಪೂರ್ ಸ್ಪರ್ಧೆಯ ಕಣದಲ್ಲಿದ್ದದ್ದು ವಿಶೇಷ. ಇವರೆಲ್ಲರನ್ನೂ ಹಿಂದಿಕ್ಕಿ ಧನುಷ್ ಮತ್ತು ಮಲ್ಲಿಕಾ ಪ್ರಶಸ್ತಿ ಗೆದ್ದಿದ್ದಾರೆ.
"ತಾನು ಶಾಕಾಹಾರಿಯಾದ ಕಾರಣ ಆರೋಗ್ಯವಾಗಿದ್ದೇನೆ. ಯಾವಾಗಲೂ ನಾನು ಅಲ್ಪಾಹಾರವನ್ನೇ ತೆಗೆದುಕೊಳ್ಳುತ್ತೇನೆ. ಪ್ರತಿ ಬಾರಿ ಊಟಕ್ಕೆ ಕುಳಿತಾದ ಪರಿಸರವನ್ನು ಗಮನದಲ್ಲಿಟ್ಟುಕೊಂಡಿರುತ್ತೇನೆ. ಸಸ್ಯಾಹಾರಿ ಆಗಿರುವ ಬಗ್ಗೆ ನನಗೆ ಹೆಮ್ಮೆ ಇದೆ. PETAಗೆ ಬೆಂಬಲಿಸಿ, ಹಸಿರನ್ನು ಉಳಿಸಿ" ಎಂದಿದ್ದಾರೆ ಧನುಷ್. (ಏಜೆನ್ಸೀಸ್)
More from Filmibeat
English summary
Kolaveri guy Dhanush and bollywood hot actress Mallika Sherawat have been voted as the Hottest Vegetarians in the latest poll by People for Ethical Treatment of Animals (PETA) India
ಮಲ್ಲಿಕಾ ಶೆರಾವತ್ ಸಸ್ಯಾಹಾರಿ ಧನುಷ್ ವಿದ್ಯಾ ಬಾಲನ್ ಪ್ರಶಸ್ತಿ mallika sherawat vegetarian dhanush vidya balan


Click it and Unblock the Notifications











