»   » ಸುದೀರ್ಘ ಸಮಯದ ಬಳಿಕ ಚೆನ್ನೈನಲ್ಲಿ ಕನ್ನಡ ಚಿತ್ರ

ಸುದೀರ್ಘ ಸಮಯದ ಬಳಿಕ ಚೆನ್ನೈನಲ್ಲಿ ಕನ್ನಡ ಚಿತ್ರ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರ ರಾಜ್ಯದ ಗಡಿ ದಾಟಿ ತಮಿಳುನಾಡಿನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುದೀರ್ಘ ಸಮಯದ ಬಳಿಕ ಕನ್ನಡ ಚಿತ್ರವೊಂದು ನೆರೆ ರಾಜ್ಯದಲ್ಲಿ ತೆರೆಕಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದು ಕನ್ನಡ ಚಿತ್ರೋದ್ಯಮದವನ್ನು ಪುಳಕಗೊಳಿಸಿದೆ.

ಸತತ ಎರಡು ವಾರಗಳ ಕಾಲ 'ಜಾಕಿ' ಚಿತ್ರ ಚೆನ್ನೈನ ಮಾಯಾಜಾಲ್ ಚಿತ್ರಮಂದಿರಲ್ಲಿ ಮುನ್ನುಗ್ಗುತ್ತಿದ್ದು ಕನ್ನಡ ಚಿತ್ರಗಳಿಗೂ ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಹಿಂದೆ ಮೋಹನ್ ಅಭಿನಯದ 'ಕೋಕಿಲ' ಚಿತ್ರ ಶತಕ ಬಾರಿಸಿತ್ತು. ಈಗ 'ಜಾಕಿ' ಚಿತ್ರವೂ ಅದೇ ಹಾದಿಯಲ್ಲಿ ಮುನ್ನಡೆದಿದೆ.

ರಾಜ್ಯದ ಗಡಿ ದಾಟಿದ 'ಜಾಕಿ' ಚಿತ್ರ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ದೇಶದ ಗಡಿಯನ್ನೂ ದಾಟಲಿದೆ. ಈ ಬಗ್ಗೆ ವಿವರ ನೀಡಿರುವ ರಾಘವೇಂದ್ರ ರಾಜ್ ಕುಮಾರ್, ಈಗಾಗಲೆ ವಿದೇಶಿ ವಿತರಣೆ ಹಕ್ಕುಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಮೆರಿಕ, ಯುಕೆ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸಿಂಗಪುರ ಮತ್ತು ದುಬೈನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಚೆನ್ನೈ ಸೇರಿದಂತೆ ದೇಶದಾದ್ಯಂತ ಬಾಕ್ಸಾಫೀಸ್ ಕೊಳ್ಳೆಹೊಡೆಯುತ್ತಿರುವ 'ಎಂಧಿರನ್' ಚಿತ್ರಕ್ಕೆ 'ಜಾಕಿ' ಸಡ್ಡು ಹೊಡಿದಿರುವುದು ತಮಿಳು ಚಿತ್ರೋದ್ಯಮವನ್ನು ಮೂಕ ವಿಸ್ಮಿತ ಮಾಡಿದೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬಗಳಿಗೆ ಜಾಕಿ ವ್ಯಾಪಾರ ವಹಿವಾಟು ಮತ್ತ್ತಷ್ಟು ಹೆಚ್ಚಾಗಲಿದೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada