ಕಾವೇರಿದ ಜಟಾಪಟಿ; ಅಂಬರೀಷ್ ಸಂಧಾನಕ್ಕೆ ಸಜ್ಜು

ಇಂದೂ ಸಂಧಾನ ವಿಫಲವಾದರೆ ಅಥವಾ ತಮ್ಮ ಪರವಾಗಿ ತೀರ್ಪು ಬಾರದಿದ್ದರೆ ತಾವು ಫಿಲಂ ಚೇಂಬರ್ ಮುಂದೆ ಧರಣಿ ಕುಳುತುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ ಕೆ ಮಂಜು. ಅವರ ಬೆದರಿಕೆಯ ಪರಿಣಾಮವೋ ಏನೋ, ಸಂಧಾನ ಸಭೆ ಈಗ ಮುಂದೂಡಲ್ಪಟ್ಟಿದೆ. ನಾಳೆ 4 ಗಂಟೆಗೆ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗುವುದೆಂಬ ಮಾಹಿತಿ ಬಂದಿದೆ.
ಈ ಮಧ್ಯೆ ಟಿವಿ ವಾಹಿನಿಯೊಂದರಲ್ಲಿ ತಮ್ಮ ಕುರಿತು ಕೆ ಮಂಜು 'ಚೇಲಾ' ಎಂದಿದ್ದಾರೆಂದೂ, ಅದಕ್ಕೆ ಮನನೊಂದು ತಾವು ರಾಜೀನಾಮೆ ನೀಡಿದ್ದಾಗಿಯೂ ಫಿಲಂ ಚೇಂಬರ್ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ ಅದಕ್ಕೆ ತಾವು ಹೊಣೆಗಾರರಲ್ಲ ಎಂದು ಮಂಜು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಮುಂದೇನಾಗುತ್ತೋ ಎನ್ನುವ ಕುತೂಹಲ ಎಲ್ಲರಲ್ಲಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Ambarish Leadership Reconciliation Meeting is to Solve producers K Manju and Munirthna Controversy, Tomorrow on 24th April 2012.


Click it and Unblock the Notifications











