»   »  ತೆಲುಗು, ಹಿಂದಿ ಭಾಷೆಗೆ ಕನ್ನಡದ ರಸಗುಲ್ಲ

ತೆಲುಗು, ಹಿಂದಿ ಭಾಷೆಗೆ ಕನ್ನಡದ ರಸಗುಲ್ಲ

Subscribe to Filmibeat Kannada
Richa in Rasagulla
ಕನ್ನಡದಲ್ಲಿ ಚಿತ್ರ ನಿರ್ಮಾಣಮಾಡಲು ಉತ್ತಮ ಕತೆಗಳಿಲ್ಲ ಎಂಬ ಮಾತು ಒಂದು ವಲಯದಿಂದ ಕೇಳಿ ಬರುತ್ತಿರುವ ಈ ಸಮಯದಲ್ಲಿ ಎಷ್ಟೋ ಮಂದಿ ನಿರ್ಮಾಪಕರು ರಿಮೇಕ್ ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಕನ್ನಡದಲ್ಲಿ ಕತೆಯ ಬರ ಖಂಡಿತಾ ಇಲ್ಲ. ಅದು ಸಮುದ್ರದ ನೀರಿನ ಹಾಗೆ. ಉತ್ತಮ ಕತೆ ಹುಡುಕುವ ಯತ್ನ ನಿರ್ಮಾಪಕರಿಂದಾಗಬೇಕಷ್ಟೇ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ನಿರ್ಮಾಣವಾದ 'ರಸಗುಲ್ಲ' ಚಿತ್ರ ತೆಲಗು ಹಾಗೂ ಹಿಂದಿ ಭಾಷೆಗೆ ಡಬ್ಬ್ ಆಗುತ್ತಿರುವುದು ಸಂತಸದ ಸಂಗತಿ. ಪ್ರಸ್ತುತ ಚಿತ್ರದ ನಿರ್ಮಾಪಕಿ ಕುಮಾರಿ ಸಂಜನಾ ಅವರಿಂದಲ್ಲೇ ಈ ಪ್ರಯತ್ನ ನಡೆಯುತ್ತಿದೆ.

ವೈಜ್ಞಾನಿಕ ಸಂಶೋಧನೆಯೊಂದಿಗೆ ಉತ್ತಮ ಪ್ರೇಮಕತೆಯನ್ನೂ ಹೊಂದಿರುವ 'ರಸಗುಲ್ಲ' ಸಕಲ ಚಟುವಟಿಕೆ ಪೂರೈಸಿ ಬಿಡುಗಡೆಯಾಗಲು ಸಿದ್ದವಾಗುತ್ತಿದೆ. ಕುಲಭೂಷಣ್ ಖರ್ಬಂದಾ ಅವರು ವಿಶೇಷಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಗೋವರ್ಧನ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದ್ದಲ್ಲದೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆ, ದಿವಾಕರ್‌ರಾವ್ ಛಾಯಾಗ್ರಹಣ, ಪಿ.ಆರ್.ಸೌಂದರರಾಜ್ ಸಂಕಲನ, ಲೀಲಾಮನೋಹರ್ ನಿರ್ಮಾಣನಿರ್ವಹಣೆಯಿದೆ.ಪಿಯೂಷ್, ಆನಂದ್, ಕಶೀಷ್‌ರೀಚಾ, ಆರ್ಯ, ಮನೋಜ್, ಕುಲಭೂಷಣ್‌ಖರ್ಬಂದಾ ಅವರ ಅಭಿನಯವನ್ನು ರಸಗುಲ್ಲ ಹೊಂದಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಕಣ್ಣಿಗೆ ರಸಗುಲ್ಲ!
ಕುಲಭೂಷಣ ಖರಬಂದ ಕನ್ನಡಕ್ಕೆ ಮತ್ತೆ ಬಂದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada