»   » ಹಿನ್ನೆಲೆ ಸಂಗೀತದಲ್ಲಿ ಗರ್ಜಿಸಿದ ಕಿಶೋರ್ ಹುಲಿ

ಹಿನ್ನೆಲೆ ಸಂಗೀತದಲ್ಲಿ ಗರ್ಜಿಸಿದ ಕಿಶೋರ್ ಹುಲಿ

Posted By:
Subscribe to Filmibeat Kannada

ಕಿಶೋರ್ ಮುಖ್ಯಭೂಮಿಕೆಯ ನಿರ್ದೇಶಕ ಓಂಪ್ರಕಾಶ್‌ರಾವ್ ಅವರ ನೇತೃತ್ವದಲ್ಲಿ 'ಹುಲಿ' ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು.

ಪೋಷಕ ಪಾತ್ರಗಳಿಗೆ ಜೀವತುಂಬಿ ನೋಡುಗರ ಮೆಚ್ಚುಗೆಗೆ ಪಾತ್ರರಾಗಿರುವ ಕಿಶೋರ್ ಈ ಚಿತ್ರದ ನಾಯಕ. ಬೆಡಗಿ ಜನ್ನಿಫರ್ ನಾಯಕಿಯಾಗಿ ನಟಿಸಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸ್ವಸ್ತಿಕ್‌ಶಂಕರ್, ಆದಿಲೋಕೇಶ್, ಪ್ರೇಮ್, ಶೋಭರಾಜ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕಾ, ಚಿತ್ರಾಶೆಣೈ ಮುಂತಾದವರಿದ್ದಾರೆ.

ಅಭಿಮಾನ್‌ರಾಯ್ ಸಂಗೀತವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಛಾಯಾಗ್ರಹಣ, ಡೆನ್ನಿಸಾ ಪ್ರಕಾಶ್ ಕಥೆ, ಡಿ.ಮನೋಹರ್ ಚಿತ್ರಕಥೆ, ಪಳನಿರಾಜ್ ಸಾಹಸ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿದೆ. ಶಿವು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ 'ಹುಲಿ ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada