»   » ಮಾನಸ್ ಈಗ 'ಸ್ಯಾಂಡಲ್‌ವುಡ್ ಗುರು'

ಮಾನಸ್ ಈಗ 'ಸ್ಯಾಂಡಲ್‌ವುಡ್ ಗುರು'

Posted By:
Subscribe to Filmibeat Kannada

ಕಿರುತೆರೆ ಜಾಹಿರಾತು, ಸಾಕ್ಷ್ಯಚಿತ್ರಗಳಲ್ಲಿ ಅಭಿನಯ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಅನುಭವ ಪಡೆದಿರುವ ಮಾನಸ್ 'ಸ್ಯಾಂಡಲ್‌ವುಡ್ ಗುರು' ಚಿತ್ರದ ಮೂಲಕ ಹಿರಿತೆರೆ ಪ್ರವೇಶ ಮಾಡಿದ್ದಾರೆ.

ನಾಯಕನಾಗಿರುವ ಮಾನಸ್ ಚಿತ್ರದ ನಿರ್ದೇಶಕ ಕೂಡ. ನಾಲ್ಕು ಹಾಡುಗಳಿರುವ ಈ ಚಿತ್ರದ ಚಿತ್ರೀಕರಣ ರಾಮನಗರ ಬೆಟ್ಟ, ಬೆಂಗಳೂರು ಹಾಗೂ ಅದರ ಸುತ್ತಮುತ್ತ ಸಂಪೂರ್ಣಗೊಂಡಿದೆ. ಈಗ ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಂತರದ ಚಟುವಟಿಕೆಗಳು ನಡೆಯುತ್ತಿದೆ.ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ನಿರ್ದೇಶಕರು 'ಸ್ಯಾಂಡಲ್‌ವುಡ್ ಗುರು' ಹಾಸ್ಯ ಸನ್ನಿವೇಶಗಳಿಲ್ಲದ ವಿಭಿನ್ನ ಚಿತ್ರವೆನ್ನುತ್ತಾರೆ. ಕತ್ತಿವರಸೆ ಸೇರಿದಂತೆ ಚಿತ್ರದಲ್ಲಿ ಬರುವ ಹಲವು ಸಾಹಸ ದೃಶ್ಯಗಳು ನೋಡುಗರನ್ನು ಆಕರ್ಷಿಸುತ್ತದೆ ಎಂದು ಮಾನಸ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಮೂವೀಸ್‌ನ ಸ್ಪೆನ್ಸರ್ ಮ್ಯಾಥ್ಯೂ ಹಾಗೂ ಗುಡ್‌ಬೀ ಹನಿ ಪ್ರೊಡಕ್ಷನ್ಸ್‌ನ ಚಾಂಪ್ ಕುಮಾರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಜೇಮ್ಸ್ ಆರ್ಕಿಟೆಕ್ ಅವರ ಸಂಗೀತವಿದೆ. ಸಂತೋಷ್ ಛಾಯಾಗ್ರಹಣ, ಡಿ.ಜೆ.ಮಹೇಶ್‌ಕುಮಾರ್ ಸಾಹಿತ್ಯವಿರುವ 'ಸ್ಯಾಂಡಲ್‌ವುಡ್ ಗುರು' ಚಿತ್ರದ ನಾಯಕಿಯಾಗಿ ಹುಬ್ಬಳ್ಳಿ ಹುಡುಗಿ ಅಕ್ಷತಾ ಶೆಟ್ಟಿ ಅಭಿನಯಿಸಿದ್ದಾರೆ. ನವ್ಯಾ, ಆಕಾಂಕ್ಷ, ಸಿ.ಆರ್.ರಮೇಶ್, ಸೌಜನ್ಯ, ಮಾಸ್ಟರ್ ಚಿರಂಜೀವಿ, ಮಾಸ್ಟರ್ ಸುಶಾಂತ್, ಬೇಬಿ ಶಿವಾನಿ ದೇಸಾಯಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada