»   » ಒನ್ ಟೂ ತ್ರೀ ಎಣಿಸುತ್ತಿರುವ 'ಲಕ್ಕಿ' ನಿರ್ಮಾಪಕಿ ರಾಧಿಕಾ

ಒನ್ ಟೂ ತ್ರೀ ಎಣಿಸುತ್ತಿರುವ 'ಲಕ್ಕಿ' ನಿರ್ಮಾಪಕಿ ರಾಧಿಕಾ

Posted By:
Subscribe to Filmibeat Kannada

ರಾಧಿಕಾ ಕುಮಾರಸ್ವಾಮಿ ಪ್ರಪ್ರಥಮ ನಿರ್ಮಾಣದ, ಶಮಿಕಾ ಎಂಟರ್ ಪ್ರೈಸಸ್ ಚಿತ್ರ 'ಲಕ್ಕಿ' ಚಿತ್ರ ನಾಳೆ (ಫಬ್ರವರಿ 24, 2012) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ಬಿಡುಗಡೆ ಘೋಷಿಸಿರುವ ರಾಧಿಕಾ, ಸಹಜವಾಗಿ ಆತಂಕದಲ್ಲಿದ್ದಾರೆ. ತಮ್ಮ ನಿರ್ಮಾಣದ ಪ್ರಪ್ರಥಮ ಚಿತ್ರಕ್ಕೆ ಪ್ರೇಕ್ಷಕರು ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲವೂ ಅವರ ಜೊತೆಗಿದೆ. ಸದ್ದಿಲ್ಲದೇ ಮುಂದಿನ ಚಿತ್ರದ ನಿರ್ಮಾಣಕ್ಕೂ ತೊಡಗಿದ್ದಾರೆ ರಾಧಿಕಾ.

ಲಕ್ಕಿಯ ಆಡಿಯೋ ಹಿಟ್ ಆಗಿದ್ದು, ಆ ವಿಷಯದಲ್ಲಿ ರಾಧಿಕಾ ಲಕ್ಕಿ ಎನಿಸಿಕೊಂಡಿದ್ದಾರೆ. ಹಾಡುಗಳಿಗೆ ಬಂದ ಉತ್ತಮ ಪ್ರತಿಕ್ರಿಯೆಗೆ ಖುಷಿಯಾಗಿದೆ ಸಂಪೂರ್ಣ ಚಿತ್ರತಂಡ. ನಿರ್ಮಾಪಕಿ ರಾಧಿಕಾ ಪ್ರಕಾರ ಲಕ್ಕಿ ಚಿತ್ರ ತೀರಾ ವಿಭಿನ್ನವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಮೊದಲ ಪ್ರಯತ್ನ ಇದಾಗಿದೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರವಹಿಸಿದೆ. ಚಿತ್ರದ ಅಡಿಬರಹ 'ಎನ್ Luck ಮಗಾ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಮೋಹಕತಾರೆ ರಮ್ಯಾ ಜೋಡಿ ಪ್ರಮುಖ ಪಾತ್ರದಲ್ಲಿದ್ದಾರೆ. ರಾಧಿಕಾಗೆ ರಮ್ಯಾ ಮಾತ್ರ ಈ ಪಾತ್ರಕ್ಕೆ ಸೂಕ್ತ ಎನಿಸಿರುವುದರಿಂದ ಅವರನ್ನೇ ಆಯ್ಕೆ ಮಾಡಲಾಗಿದೆ. ನಿರ್ದೆಶಕ ಡಾ ಸೂರಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ. ಒಟ್ಟಿನಲ್ಲಿ ಯಶ್ ಹಾಗೂ ರಮ್ಯಾ ಅಭಿಮಾನಿಗಳಿಗೆ ಫೆಬ್ರವರಿ 24ಕ್ಕೆ ಹಬ್ಬದೂಟ. ರಾಧಿಕಾ ನಿರ್ಮಾಣದ ಮೊದಲ ಚಿತ್ರ ಇನ್ನೇನು ನಾಳೆ ತೆರೆಗೆ ಅಪ್ಪಳಿಸಲಿದೆ. ನಿರ್ಮಾಪಕಿ ರಾಧಿಕಾ 'ಒನ್ ಟೂ ತ್ರೀ' ಎಣಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Radhika Kumaraswamy produced movie 'Lucky' is going to release tomorrow, Feb. 24, 2012. Yash and Ramya in lead role. Dr. Suri Directed this movie.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X