»   » ಪ್ರೇಮಿಗಳ ಪಾಲಿನ ಲವ್ ಗುರು ಹಂಸಲೇಖ ಹುಟ್ಟುಹಬ್ಬ

ಪ್ರೇಮಿಗಳ ಪಾಲಿನ ಲವ್ ಗುರು ಹಂಸಲೇಖ ಹುಟ್ಟುಹಬ್ಬ

Posted By:
Subscribe to Filmibeat Kannada

ಸ್ವಾತಿಮುತ್ತಿನ ಮಳೆಹನಿಯೋ(ಬಣ್ಣದ ಗೆಜ್ಜೆ)..ಎಂದು ಬರೆಯುವ ಮೂಲಕ ಪ್ರೇಮಿಗಳ ಮೈಬೆಚ್ಚಗೆ ಮಾಡಿದ, ಕುಡಿಯೋದೆ ನನ್ನ ವೀಕ್ನೆಸ್ಸು(ಯುದ್ಧಕಾಂಡ) ಎಂದು ಬರೆದ ಕುಡುಕರ ಪಾಲಿನ ಆರಾಧ್ಯ ದೈವ. ಕೆಲವು ಪೋಲಿ ಹಾಡುಗಳ ಸರದಾರ ಹಂಸಲೇಖ(59) ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯ ಹಂಸಲೇಖ ಅವರ ಸಂಗೀತದ ವಿಶೇಷ. ಮೈಸೂರಿನವರಾದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. 'ತ್ರಿವೇಣಿ'(1973) ಚಿತ್ರದ ಮೂಲಕ ಗೀತ ಸಾಹಿತಿಯಾಗಿ 'ರಾಮಚಂದ್ರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹಂಸಲೇಖ ಕನ್ನಡ ಚಿತ್ರರಂಗೆಕ್ಕೆ ಪದಾರ್ಪಣೆ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದ ಮಹೋನ್ನತ ಸಂಗೀತ ನಿರ್ದೇಶಕರಲ್ಲಿ ಹಂಸಲೇಖ ಒಬ್ಬರು. ಪ್ರೇಮಲೋಕ ಚಿತ್ರದ ಮೂಲಕ ಹೊಸ ಅಲೆಯ ಸಂಗೀತವನ್ನು ಕೊಟ್ಟ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಪ್ರೀತಿ, ಪ್ರೇಮ ಪ್ರಣಯ ಉಕ್ಕಿಸುವ ಸಾಹಿತ್ಯ ಸಂಗೀತದಿಂದ ಪ್ರೇಮಿಗಳ ಪಾಲಿನ ಲವ್ ಗುರು ಎನ್ನಿಸಿಕೊಂಡವರು.

ಒಂದು ದಶಕಕ್ಕೂ ಹೆಚ್ಚು ಕಾಲ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿದ್ದವು. ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಪಾಶ್ಚಾತ್ಯ ಸಂಗೀತದ ಸಂಗಮನನ್ನು ಉಣಬಡಿಸಿ ಕನ್ನಡ ಚಿತ್ರರಸಿಕರ ಮನ ತಣಿಸಿದ ಮಹಾನ್ ಸಂಗೀತ ನಿರ್ದೇಶಕ ಹಂಸಲೇಖ. ಆಕಾಶದಾಗೆ ಯಾರೊ ಮಾಯಗಾರ ಚಿತ್ತಾರ ಮಾಡಿದಂತೆ ಹಂಸ್ ಹೀಗೆ ನೂರ್ಕಾಲ ಬರೆಯುತ್ತಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada