»   »  ಕನ್ನಡದಲ್ಲಿ ನಾನಾ ಪಾಟೇಕರ್ ಸಂಭಾವನೆ ಎಷ್ಟು?

ಕನ್ನಡದಲ್ಲಿ ನಾನಾ ಪಾಟೇಕರ್ ಸಂಭಾವನೆ ಎಷ್ಟು?

Posted By:
Subscribe to Filmibeat Kannada

ರಮೇಶ್ ಆರ್ ಭಾಗವತ್ ನಿರ್ದೇಶಿಸುತ್ತಿರುವ 'ಯಕ್ಷ' ಚಿತ್ರಕ್ಕೆ ನಾನಾ ಪಾಟೇಕರ್ ಎಷ್ಟು ಸಂಭಾವನೆ ಪಡೆದಿದ್ದಾರೆ? ಬಾಲಿವುಡ್ ಚಿತ್ರವೊಂದಕ್ಕೆ ನಾನಾ ಪಾಟೇಕರ್ ಬರೋಬ್ಬರಿ ರು.5 ಕೋಟಿ ಚಾರ್ಚ್ ಮಾಡುತ್ತಾರಂತೆ. ಆದರೆ ಕನ್ನಡಲ್ಲಿ 'ಯಕ್ಷ' ಚಿತ್ರಕತೆ ತುಂಬ ಇಷ್ಟವಾಗಿರುವ ಕಾರಣ ಸಂಭಾವನೆಯಲ್ಲಿ ಸಾಕಷ್ಟು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು.

ಇಷ್ಟಕ್ಕೂ ನಾನಾ ಪಾಟೇಕರ್ ಕನ್ನಡದಲ್ಲಿ ಪಡೆಯುತ್ತಿರುವ ಸಂಭಾವನೆ ರು.1 ಕೋಟಿಯಂತೆ. ಈ ಚಿತ್ರದಲ್ಲಿ ನಾನಾ ಬರೀ ಅಭಿನಯಿಸುತ್ತಿಲ್ಲ. ಡಬ್ಬಿಂಗ್ ಸಹಾ ಅವರೇ ಹೇಳುತ್ತಿದ್ದ್ದು ಒಂದು ಹಾಡನ್ನು ಹಾಡಲಿದ್ದಾರಂತೆ. ಈಗಾಗಲೇ ಹಿಂದಿ ಸಂಭಾಷಣೆಯನ್ನು ನಾನಾ ಅವರಿಗೆ ನಿರ್ದೇಶಕ ರಮೇಶ್ ಕೊಟ್ಟಿದ್ದಾರೆ. ಉಚ್ಛಾರಣೆಗೆ ಸಹಕಾರಿಯಾಗಲು ಕನ್ನಡ ಸಂಭಾಷಣೆಯ ಸಿಡಿ ಕೊಡುವುದಾಗಿ ರಮೇಶ್ ತಿಳಿಸಿದ್ದಾರೆ.

ಎರಡು ದಶಕಗಳಿಂದ ಕನ್ನಡ ಚಿತ್ರೋದ್ಯಮದಲ್ಲಿರುವ ರಮೇಶ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದಾಗಲಿದೆ. ಈ ಚಿತ್ರದಲ್ಲಿ ಯೋಗೀಶ್ ಮತ್ತು ಪ್ರಣೀತಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಯೋಗೀಶ್, ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಕಲಾಭವನ್ ಮಣಿ ತಾರಾಗಣದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada