»   » ಓಂ ಪ್ರಕಾಶ್ ರಾವ್ ಎಕೆ 56 ಚಿತ್ರಕ್ಕೆ ಸಖತ್ ರೆಸ್ಪಾನ್ಸ್

ಓಂ ಪ್ರಕಾಶ್ ರಾವ್ ಎಕೆ 56 ಚಿತ್ರಕ್ಕೆ ಸಖತ್ ರೆಸ್ಪಾನ್ಸ್

Posted By:
Subscribe to Filmibeat Kannada

ಓಂ ಪ್ರಕಾಶ್ ರಾವ್ ನಿರ್ದೇಶನದ ಅದ್ದೂರಿ ಚಿತ್ರ 'ಎಕೆ 56' ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್ ಗಳಿಕೆಯಲ್ಲೂ ಈ ಚಿತ್ರ ಮುನ್ನುಗ್ಗುತ್ತಿದ್ದು ದಿನದಿಂದ ದಿನಕ್ಕೆ ಕಲೆಕ್ಷನ್ ಏರಿಕೆಯಾಗುತ್ತಿದೆ ಎನ್ನುತ್ತಾರೆ ಓಂ. 'ಎಕೆ 47' ತೆರೆಕಂಡ ಹತ್ತು ವರ್ಷಗಳ ಬಳಿಕ ಓಂ ಆಕ್ಷನ್ ಕಟ್ ಹೇಳಿದ ಚಿತ್ರ ಇದಾಗಿದೆ.

'ಎಕೆ 56' ಚಿತ್ರದ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಿಲ್ಲ. ಎಲ್ಲಾ ಕಡೆಯಿಂದಲೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೊಸ ನಾಯಕ ನಟ ಸಿದ್ಧಾಂತ್ ಅವರ ಆಕ್ಷನ್ ನೋಡಿ ಜನ ಬೆರಗಾಗುತ್ತಿರುವುದಾಗಿ ಓಂ ತಿಳಿಸಿದ್ದಾರೆ. ಕನ್ನಡ ಚಿತ್ರೋದ್ಯಮಕ್ಕೆ ಹೊಸ ಆಕ್ಷನ್ ಹೀರೋ ಪರಿಚಯಿಸಿದ ಹೆಗ್ಗಳಿಕೆ ತಮ್ಮದು ಎಂದು ಓಂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡ ಸಂತಸದಲ್ಲಿರುವ ಓಂ ಅವರು ಸಿದ್ಧಾಂತ್ ಜೊತೆ ಮತ್ತೊಂದು ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದಾರೆ. "ನನ್ನನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಕಂಡು ಸ್ವಲ್ಪ ಧೈರ್ಯ ಬಂದಿದೆ" ಎಂದಿದ್ದಾರೆ ಚಿತ್ರದ ನಾಯಕ ನಟ ಸಿದ್ಧಾಂತ್. (ಒನ್‌ಇಂಡಿಯಾ ಕನ್ನಡ)

English summary
Om Prakash Rao's big budget Kannada film AK 56 doing well in box office. AK 56 movie is revolves around the innocent who is tagged as a terrorist without any inquiry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada