»   » ಲಕ್ಕಿ ಸಿನಿಮಾಕ್ಕೆ ಕಥೆ ಹುಟ್ಟಿದ ಗುಟ್ಟು ರಟ್ಟು

ಲಕ್ಕಿ ಸಿನಿಮಾಕ್ಕೆ ಕಥೆ ಹುಟ್ಟಿದ ಗುಟ್ಟು ರಟ್ಟು

Posted By:
Subscribe to Filmibeat Kannada

ಲಕ್ಕಿ ಚಿತ್ರದ ಕಥೆ ಹುಟ್ಟಿಕೊಂಡ 'ಕಥೆ' ಕುತೂಹಲಕಾರಿಯಾಗಿದೆ. ಕಥೆಗಾರ ಹಾಗೂ ಗೀತರಚನೆಕಾರ ಗೌಸ್ ಪೀರ್ ಹೇಳುವ ಪ್ರಕಾರ, ಕಥೆಯ ಎಳೆ ಹುಟ್ಟಿಕೊಂಡಿದ್ದು ನಟಿ ರಮ್ಯಾ ಮತ್ತು ಅವರು ಸಾಕಿಕೊಂಡ ನಾಯಿಯನ್ನು ನೋಡಿ. ಅವರಿಬ್ಬರ ಸಂಬಂಧ ಎಷ್ಟು ಗಾಢವಾಗಿದೆ ಎಂದರೆ ಅದನ್ನು ನೋಡಿ ಕಥೆ ಬರೆಯುವಷ್ಟು ಹಾಗೂ ಕಥೆ ಸಿನಿಮಾ ಆಗುವಷ್ಟು ಎಂಬುದು ಆಶ್ಚರ್ಯವಾಗಿ ಕಂಡರೂ ಸತ್ಯವಂತೆ.

ಲಕ್ಕಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಲ್ಲದೇ ಎರಡು ಹಾಡುಗಳನ್ನೂ ಬರೆದಿದ್ದಾರೆ ಗೌಸ್ ಪೀರ್. "ಮಕ್ಕಳಿಂದ ಮುದುಕರವರೆಗೂ ಎಲ್ಲಾ ವರ್ಗದ ಜನರಿಗೂ ಇಷ್ಟವಾಗುವಂತೆ ಚಿತ್ರಕಥೆ ಬರೆದಿದ್ದೇನೆ. ಚಿತ್ರಕ್ಕೆ ಬೇಕಾಗಿರುವ ಎಲ್ಲವನ್ನೂ ಚೆನ್ನಾಗಿ ಅಳವಡಿಸಿ ಲಕ್ಕಿಯನ್ನು ತುಂಬಾ ನೀಟಾಗಿ ಮಾಡಿದ್ದಾರೆ ಡಾ. ಸೂರಿ" ಎಂದಿದ್ದಾರೆ ಗೌಸ್ ಪೀರ್. ಇಡೀ ಚಿತ್ರ ಲಿಂಕ್ ನಲ್ಲೇ ಸಾಗುತ್ತದೆಯಂತೆ.

"ಬಹಳಷ್ಟು ಚಿತ್ರಗಳಲ್ಲಿ ಹಾಸ್ಯವನ್ನು ಅನಾವಶ್ಯಕ ತುರುಕಲಾಗಿರುತ್ತೆ. ಆದರೆ ಲಕ್ಕಿಯಲ್ಲಿ ಪಾತ್ರಗಳ ಜೊತೆಜೊತೆಗೇ ಸಾಗುವ ಹಾಸ್ಯ, ಕಥೆಯಲ್ಲಿ ಮರ್ಜ್ ಆಗಿದೆ, ಹಾಗಾಗಿ ಎಲ್ಲೂ ಬೋರ್ ಆಗುವುದಿಲ್ಲ. ನಿರ್ಮಾಪಕರು ಕಥೆಗೆ ಗ್ರೀನ್ ಸಿಗ್ನಲ್ ನೀಡಿ, ನಿರ್ಮಾಣ ಮಾಡುವುದರ ಜೊತೆ ಸಾಕಷ್ಟು ಸಹಕರಿಸಿದ್ದಾರೆ. ನಾಯಕ ಯಶ್ ಕೂಡ ಮಾರಲ್ ಸಪೋರ್ಟ್ ನೀಡಿದ್ದಾರೆ. ಇನ್ನು ನಾಯಕಿ ರಮ್ಯಾರಂತೂ ಕಥೆ ಹುಟ್ಟಲು ಕಾರಣವಾದ ಕಥಾನಾಯಕಿ" ಎಂದಿದ್ದಾರೆ ಗೌಸ್ ಪೀರ್.

English summary
Radhika produced movie Lucky releases tomorrow, 24 Feb, 2012. Lucky screen play is by Gouspeer and direction by Dr Suri. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X