»   »  ಕನ್ನಡಕ್ಕೆ ರಾಜ್ ಮ್ಯೂಸಿಕ್, ನ್ಯೂಸ್ ಚಾನಲ್ ಗಳು

ಕನ್ನಡಕ್ಕೆ ರಾಜ್ ಮ್ಯೂಸಿಕ್, ನ್ಯೂಸ್ ಚಾನಲ್ ಗಳು

Posted By: Super
Subscribe to Filmibeat Kannada
Raj TV to launch Kannada music, news channels
ಕರ್ನಾಟಕಕ್ಕೆ ಮತ್ತೊಂದು ಟಿವಿ ಚಾನಲ್ ಲಗ್ಗೆ ಇಡುತ್ತಿದೆ. 58.6ಕೋಟಿ ರು.ಗಳ ರಾಜ್ ಟೆಲಿವಿಷನ್ ನೆಟ್ ವರ್ಕ್, ತಮಿಳುನಾಡಿನ ಎರಡನೇ ಅತಿದೊಡ್ಡ ತಮಿಳು ಸ್ಯಾಟಲೈಟ್ ಟೆಲಿವಿಷನ್ ಕಂಪನಿಯಾಗಿದ್ದು ಸಂಗೀತ ಮತ್ತು ಸುದ್ದಿಗಳನ್ನು ಬಿತ್ತರಿಸಲು ಆಗಮಿಸುತ್ತಿದೆ.

ಮುಂದಿನ ತಿಂಗಳಲ್ಲಿ ರಾಜ್ ಕನ್ನಡಮ್ಯೂಸಿಕ್ ಚಾನೆಲ್ ಆರಂಭವಾಗಲಿದ್ದು ಏಪ್ರಿಲ್ ತಿಂಗಳಲ್ಲಿ ರಾಜ್ ಸುದ್ದಿ ವಾಹಿನಿ ಬಿಸಿಬಿಸಿ ಸುದ್ದಿಗಳನ್ನು ಹೊತ್ತು ತರಲಿದೆ ಎಂದು ರಾಜ್ ಟಿವಿ ಕಾರ್ಯಕ್ರಮ ನಿರ್ದೇಶಕ ಎಂ.ರವೀಂದ್ರ ತಿಳಿಸಿದ್ದಾರೆ. ರಾಜ್ ಮ್ಯೂಸಿಕ್(Raj Musix ) ಚಾನೆಲ್ ಕಂಪನಿಯ ಎರಡನೇ ಸಂಗೀತ ವಾಹಿನಿಯಾಗಿದೆ. ಕಳೆದ ವರ್ಷವಷ್ಟೇ ತಮಿಳು ಮ್ಯೂಸಿಕ್ ಚಾನೆಲ್ ಆರಂಭವಾಗಿತ್ತು. ಇದೇ ರೀತಿಯ ಚಾನೆಲ್ ಗಳನ್ನು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಆರಂಭಿಸುತ್ತಿರುವುದಾಗಿ ಕಂಪನಿ ಈಗಾಗಲೇ ಪ್ರಕಟಿಸಿದೆ.

ಕನ್ನಡದಲ್ಲಿ ಈಗಾಗಲೇ ಸನ್ ನೆಟ್ ವರ್ಕ್ ನ ಯು2 ಸಂಗೀತ ಚಾನೆಲ್ ಕಾರ್ಯನಿರ್ವಹಿಸುತ್ತಿದ್ದು ಈಗ ಹೊಸದಾಗಿ ರಾಜ್ ಮ್ಯೂಸಿಕ್ ಸೇರ್ಪಡೆಯಾಗುತ್ತಿದೆ. ಕಳೆದ ವರ್ಷ ಕಂಪನಿ ನಾಲ್ಕು ಮ್ಯುಸಿಕ್ ಚಾನೆಲ್ ಗಳ ಮೇಲೆ 4 ಕೋಟಿ ರು.ಗಳಷ್ಟು ಬಂಡವಾಳ ತೊಡಗಿಸಿ ಜಾಹೀರಾತುಗಳ ಮೂಲಕ ತಿಂಗಳಿಗೆ 5 ಕೋಟಿ ರು.ಗಳಷ್ಟು ಆದಾಯ ಗಳಿಸಿರುವುದಾಗಿ ರವೀಂದ್ರ ತಿಳಿಸಿದ್ದಾರೆ. ಟಿವಿ9, ಸುವರ್ಣ ವಾಹಿನಿ, ಉದಯ ವಾರ್ತೆಗಳ ಜೊತೆಗೆ ಮತ್ತೊಂದು 24 ಗಂಟೆಗಳ ಸುದ್ದಿವಾಹಿನಿ ದಾಂಗುಡಿಯಿಡುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X