»   »  ಜೋಡಿ ನಂ.1ನಲ್ಲಿ ಜತೆಯಾದ ರಾಮ್, ಅಭಿಜಿತ್

ಜೋಡಿ ನಂ.1ನಲ್ಲಿ ಜತೆಯಾದ ರಾಮ್, ಅಭಿಜಿತ್

Posted By:
Subscribe to Filmibeat Kannada
Ram Kumar, Abijith together in jodi no 1
ಹೊಸಬರ ನಡುವೆ ಕಳೆದುಹೋಗಿದ್ದ ಜನಪ್ರಿಯ ನಟರಾದ ರಾಮ್ ಕುಮಾರ್ ಮತ್ತು ಅಭಿಜಿತ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಜೋಡಿ ನಂ.1 ಎಂಬ ಚಿತ್ರದ ಮೂಲಕ ಇವರಿಬ್ಬರೂ ಒಟ್ಟಿಗೆ ಬಹಳ ದಿನಗಳ ನಂತರ ನಟಿಸಿದ್ದಾರೆ. ಕೊಲೆ ರಹಸ್ಯದ ಚಿತ್ರಕಥೆಯನ್ನು ಜೋಡಿ ನಂ.1 ಹೊಂದಿದೆಯಂತೆ.

ಅಭಿಜಿತ್ ನಿರ್ಮಿಸಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಅವರೇ ಆಕ್ಷನ್, ಕಟ್ ಸಹ ಹೇಳಿದ್ದಾರೆ. ಅವರ ನಿರ್ಮಾಣದ ಕೊನೆಯ ಚಿತ್ರ 'ಸಮರಸಿಂಹ ನಾಯಕ' ಬಾಕ್ಸಾಫೀಸ್ ನಲ್ಲಿ ಸೊತು ಸುಣ್ಣವಾಗಿತ್ತು. ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಮೂರು ಜವಾಬ್ದಾರಿಗಳೊಂದಿಗೆ (ನಟನೆ, ನಿರ್ದೇಶನ, ನಿರ್ಮಾಣ) ಅಭಿಜಿತ್ ಆಗಮಿಸಿದ್ದಾರೆ.

ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಾಯಕ ನಟ ರಾಮ್ ಕುಮಾರ್ ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಭಿಜಿತ್ ರ ಸೌಮ್ಯ ಸ್ವಭಾವ, ಅವರ ಕಾರ್ಯಶೈಲಿ ನನಗೆ ಇಷ್ಟ ಎನ್ನುತ್ತಾರೆ ರಾಮ್ ಕುಮಾರ್. ಅಮೃತಾ ಮತ್ತು ಸಂಗೀತಾ ಶೆಟ್ಟಿ ಕ್ರಮವಾಗಿ ಅಭಿಜಿತ್ ಮತ್ತು ರಾಮ್ ಕುಮಾರ್ ಗೆ ನಾಯಕಿಯರು. ಕೃಪಾಕರ್ ಅವರ ಸಂಗೀತ ಜೋಡಿ ನಂ1 ಚಿತ್ರಕ್ಕಿದೆ. ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ವೀರ ಮದಕರಿ: ನೂರಕ್ಕೆ ಅರುವತ್ತು ಮಾರ್ಕುಡು!
ಕಹೋನಾ ಪ್ಯಾರ್ ಹೈ ಹುಡುಗಿ ಅಮಿಶಾ ಕನ್ನಡಕ್ಕೆ?
ಐಪಿಎಲ್ ಪಂದ್ಯಗಳಿಗೆ ಕನ್ನಡ ತಾರೆಗಳ ಚಿಯರ್ಸ್!
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada