»   »  ಮಂಜಿನ ಹನಿಗಾಗಿ ರವಿಚಂದ್ರನ್ ಬೆವರಿನಹನಿ

ಮಂಜಿನ ಹನಿಗಾಗಿ ರವಿಚಂದ್ರನ್ ಬೆವರಿನಹನಿ

Posted By:
Subscribe to Filmibeat Kannada
Ravichandran completely involves in Majina Hani
ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಮುಗಿದರೂ ಇನ್ನೂ ಅದರದೇ ಚರ್ಚೆ, ಮಾತುಕತೆ ಮುಂದುವರಿಯುತ್ತಿದೆ. ಆದರೆ ಅಮೃತ ಮಹೋತ್ಸವದ ಕೇಂದ್ರ ಬಿಂದುವಾಗಿದ್ದ್ದ ನಟ ರವಿಚಂದ್ರನ್ ಮಾತ್ರ ಸದ್ದಿಲ್ಲದೆ ಮತ್ತೆ ಕೆಲಸಕ್ಕೆ ಹಿಂತಿರುಗಿದ್ದಾರೆ.

'ಮಂಜಿನ ಹನಿ' ಯ ಹೊಸ ಆವೃತ್ತಿಯ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅವರು ಚಿತ್ರದಲ್ಲಿ ಏನೇನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಮಾತನಾಡುತ್ತಿಲ್ಲ. ಏನಿದ್ದರೂ ತಮ್ಮ ಕೆಲಸ ಹಾಗೂ ಚಿತ್ರ ಮಾತನಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ತಾವು ಸುದ್ದಿಯಾಗಿದ್ದು ಸಾಕು ಇನ್ನೇನಿದ್ದರೂ ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬುದೇ ಅವರ ಮನದಾಳದ ಮಾತು.

ಅಮೃತ ಮಹೋತ್ಸವದ ಕೆಲಸಗಳು ಅವರಿಗೆ ಹೊಸ ಹುರುಪು ತಂದುಕೊಟ್ಟಿವೆಯಂತೆ. ರವಿಚಂದ್ರನ್ ರನ್ನು 15 ವರ್ಷಗಳ ಹಿಂದಕ್ಕೆ ಕರೆದೊಯ್ದಿದೆಯಂತೆ. ಈ ಹುರುಪು, ಹುಮ್ಮಸ್ಸು ಕರಗುವಷ್ಟರಲ್ಲೇ ಚಿತ್ರ ಮುಗಿಸುವ ತವಕ ಅವರದು. ಹಾಗಾಗಿ ಹಗಲು ರಾತ್ರಿ ಎನ್ನದೆ 'ಮಂಜಿನ ಹನಿ'ಗಾಗಿ ಬೆವರಿನ ಹನಿ ಹರಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮತ್ತೆ ಮಂಜಿನಹನಿ ಶೇಖರಣೆಯಲ್ಲಿ ರವಿ
47 ನೇ ಹುಟ್ಟುಹಬ್ಬದ ದಿನ ರವಿ ಹೀಗಿದ್ರು
ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada