»   » ಲವರ್ ಬಾಯ್ ಪಾತ್ರದಲ್ಲಿ ಶಿವರಾಜ್ ಕುಮಾರ್

ಲವರ್ ಬಾಯ್ ಪಾತ್ರದಲ್ಲಿ ಶಿವರಾಜ್ ಕುಮಾರ್

Subscribe to Filmibeat Kannada

ಇತ್ತೀಚೆಗೆ ಸಾಹಸ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ಲವರ್ ಬಾಯ್ ಆಗುತ್ತಿದ್ದಾರೆ. ಶಿವಣ್ಣನನ್ನು ಮತ್ತೆ ಲವರ್ ಬಾಯ್ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರುವುದು ನಿರ್ದೇಶಕ ಅನಂತರಾಜು. ಈ ಹಿಂದೆ ಅವರು ಶಿವಣ್ಣನ ಅಭಿನಯದಲ್ಲಿ 'ನಂದ' ಚಿತ್ರ ನಿರ್ದೇಶಿಸಿದ್ದರು.

ಅನಂತರಾಜು ನಿರ್ದೇಶಿಸಿದ್ದ 'ನಂದ' ರೌಡಿ ಪ್ರಧಾನ ಚಿತ್ರವಾಗಿತ್ತು. ಇದೀಗ ಕೈಗೆತ್ತಿಕೊಂಡಿರುವ ಚಿತ್ರ ಲವರ್ ಬಾಯ್ ಪ್ರಧಾನವಾಗಿರುವುದು ವಿಶೇಷ.ಹಳೆಯ ಗೆಟಪ್ ನಲ್ಲಿ ಶಿವಣ್ಣನನ್ನು ನೋಡುವ ಅವಕಾಶ ಅವರ ಅಭಿಮಾನಿಗಳ ಪಾಲಿಗೆ ಮತ್ತೆ ಸಿಗುತ್ತಿದೆ.

ಕೊಠಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಚನ್ನಪಟ್ಟಣ್ಣ ರಾಜೇಂದ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕಾಗಿ ಸೂಕ್ತ ಶೀರ್ಷಿಕೆಯ ಹುಡುಕಾಟ ನಡೆದಿದೆ. ನಾಯಕಿಯ ಶೋಧ ಕಾರ್ಯವೂ ನಡೆಯುತ್ತಿದ್ದು ಹೊಸ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಹಾಗೂ ಎಚ್ ಸಿ ವೇಣು ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada