»   »  ಬಳ್ಳಾರಿಯಲ್ಲಿ ವೀರಮದಕರಿ ಭಿತ್ತಿಪತ್ರಗಳಿಗೆ ಕೊಕ್

ಬಳ್ಳಾರಿಯಲ್ಲಿ ವೀರಮದಕರಿ ಭಿತ್ತಿಪತ್ರಗಳಿಗೆ ಕೊಕ್

Posted By:
Subscribe to Filmibeat Kannada
Veera Madakari posters banned in Bellary
ಸುದೀಪ್ ಅಭಿನಯಿಸಿ ನಿರ್ದೇಶಿಸಿರುವ 'ವೀರ ಮದಕರಿ' ಚಿತ್ರದ ಭಿತ್ತಿಪತ್ರಗಳನ್ನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ತೆರವುಗೊಳಿಸಲಾಗಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ಜೆಡಿಎಸ್ ನ ಸಂಭವನೀಯ ಅಭ್ಯರ್ಥಿ ಎಂದು ಸುದೀಪ್ ರನ್ನು ಬಿಂಬಿಸಲಾಗಿರುವುದೇ ಈ ಬೆಳವಣಿಗೆಗಳಿಗೆ ಕಾರಣ ಎನ್ನಲಾಗಿದೆ.

ಬಳ್ಳಾರಿ ಜಿಲ್ಲೆಯ ಮೂರು ಚಿತ್ರಮಂದಿರಗಳಲ್ಲಿ ವೀರ ಮದಕರಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಹೊಸಪೇಟೆಯ ಗುರು ಸಚ್ಚಿದಾನಂದ, ಬಳ್ಳಾರಿಯ ಶಿವಾ ಮತ್ತು ಹಗರಿಬೊಮ್ಮನಹಳ್ಳಿಯ ವಿಷ್ಣು ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ವೀರ ಮದಕರಿ ಚಿತ್ರ ನಾಲ್ಕು ಆಟಗಳ ಪ್ರದರ್ಶನ ಕಾಣುತ್ತಿದೆ.

ಪ್ರಚಾರ ಕಾರ್ಯಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಚಲನಚಿತ್ರದ ಭಿತ್ತಿಪತ್ರಗಳು ಚುನಾವಣಾ ನೀತಿ ಸಂಹಿತೆಯಡಿ ಬರುವ ಕಾರಣ ಅವುಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಆದೇಶ ನೀಡಿತ್ತು. ಹಾಗಾಗಿ ವೀರ ಮದಕರಿ ಅಷ್ಟೇ ಅಲ್ಲದೆ ತಾಲೂಕಿನಾದ್ಯಂತ ಎಲ್ಲ ಸಿನಿಮಾ ಭಿತ್ತಿಪತ್ರಗಳನ್ನು ತೆರವುಗೊಳಿಸಲಾಗಿದೆ.

ಚುನಾವಣಾ ನೀತಿ ಸಂಹಿತೆಯಿಂದ ಸುದೀಪ್ ನಟನೆಯ ವೀರ ಮದಕರಿ ಚಿತ್ರಕ್ಕೆ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಭಿತ್ತಿ ಪತ್ರಗಳನ್ನು ಅಂಟಿಸಿ ವೀರಮದಕರಿ ಚಿತ್ರಕ್ಕೆ ಭಾರಿ ಪ್ರಚಾರ ನೀಡಲಾಗಿತ್ತು. ಯಾವುದೇ ಚಿತ್ರದ ಭಿತ್ತಿಪತ್ರಗಳನ್ನು ಖಾಸಗಿ ಮತ್ತು ಸಾರ್ವಹನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು ಎಂಬ ಆದೇಶ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಸುಲ್ತಾನ್ ಮೆಹಮೂದ್ ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ
ವೀರ ಮದಕರಿ: ನೂರಕ್ಕೆ ಅರುವತ್ತು ಮಾರ್ಕುಡು!
ಈ ಶತಮಾನದ ವೀರಮದಕರಿ ನಾನೇ ಎಂದ ಕಿಚ್ಚ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada