»   » ಡಿಡಿಎಲ್‌ಜೆ ನಡಿಗೆ ಗಿನ್ನಿಸ್‌ ದಾಖಲೆಯೆಡೆಗೆ...!?

ಡಿಡಿಎಲ್‌ಜೆ ನಡಿಗೆ ಗಿನ್ನಿಸ್‌ ದಾಖಲೆಯೆಡೆಗೆ...!?

Subscribe to Filmibeat Kannada

ಮುಂಬಯಿ :ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಇತಿಹಾಸ ಬರೆಯಲು ಹೊರಟಿದೆ.

ಹತ್ತು ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾದಾಗ ದೇಶಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್‌ ಬೋರ್ಡುಗಳೇ ನೇತಾಡುತ್ತಿದ್ದವು. ಕಾಲೇಜಿಗೆ ಬಂಕ್‌ ಹೋಡೆದು, ತಾಸು ಗಟ್ಟಲೆ ಕ್ಯೂನಲ್ಲಿ ನಿಂತು ಟೆಕೆಟ್‌ ಪಡೆಯುತ್ತಿದ್ದ ದೃಶ್ಯ ಸರ್ವೇಸಾಮಾನ್ಯ.

ಶೋಲೆ ಚಿತ್ರ ಸತತವಾಗಿ 5ವರ್ಷಗಳ ಕಾಲ ಓಡಿದ್ದು ಈ ಮೊದಲು ಭಾರತೀಯ ದಾಖಲೆಯಾಗಿತ್ತು. ಇದೀಗ 10ವರ್ಷಗಳಿಂದ ನಗರದ ಮರಾಠಾ ಮಂದಿರ್‌ದಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರದ ದಾಖಲೆ ಮತ್ತೂ ದೊಡ್ಡದೆನಿಸಿದೆ. ಸೆಂಟ್ರಲ್‌ ಮುಂಬಯಿನಲ್ಲಿರುವ ಇದರ ಸುತ್ತಲೂ ಸೆಂಟ್ರಲ್‌ ಬಸ್‌ಸ್ಟ್ಯಾಂಡ್‌, ಎದುರಿಗೆ ಸೆಂಟ್ರಲ್‌ ರೈಲ್ವೆ ಸ್ಟೇಷನ್‌ ಮತ್ತು ಕಾಲೇಜುಗಳು ಇವೆ. ಆದ್ದರಿಂದ ಪ್ರತಿದಿನ ಶೇಕಡಾ 60ರಿಂದ 70ರಷ್ಟು ಕಲೆಕ್ಷನ್‌ ನಡೆಯುತ್ತಿದೆ.

ಚಿತ್ರವು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮೆಚ್ಚುಗೆಯನ್ನೂ ಪಡೆದಿದೆ. ಚಿತ್ರ ಪ್ರಿಯರೆಲ್ಲ ಇದಕ್ಕೆ ಡಿಡಿಎಲ್‌ಜೆ ಎಂಬ ಪುಟ್ಟ ಹೆಸರಿಟ್ಟಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಂತಿದೆ. ಇದೀಗ 500 ವಾರ ಪ್ರದರ್ಶನ ಕಂಡ ಮೊದಲ ಭಾರತೀಯ ಚಲನಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಅಲ್ಲದೆ ಗಿನ್ನೆಸ್‌ ದಾಖಲೆಯತ್ತ ಮುಖಮಾಡಿ ನಿಂತಿರುವುದರಿಂದ ಭಾರತೀಯ ಚಿತ್ರರಸಿಕರಿಗೆ ಹರ್ಷ ಉಂಟುಮಾಡಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada