»   » ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ ಪುಸ್ತಕ ಅನಾವರಣ

ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ ಪುಸ್ತಕ ಅನಾವರಣ

Posted By:
Subscribe to Filmibeat Kannada

ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಕುರಿತ ''ಡಾ.ರಾಜ್ ಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ''ಪುಸ್ತಕವನ್ನು ಪಾರ್ವತಮ್ಮ ರಾಜ್ ಕುಮಾರ್ ಇಂದು (ಏಪ್ರಿಲ್ 24) ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಉಪಸ್ಥಿತರಿದ್ದರು.

ಡಾ.ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಪವರ್ ಸ್ಟಾರ್ ಪುನೀತ್ ಹೊರತಂದಿರುವ ಈ ಪುಸ್ತಕದಲ್ಲಿ ರಾಜ್ ವ್ಯಕ್ತಿತ್ವದ ಹಲವು ಮಜಲುಗಳು ಅನಾವರಣಗೊಂಡಿವೆ. ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿವೆ. ಕನ್ನಡಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬಂದಿರುವ ಈ ಪುಸ್ತಕ ರಾಜ್ ಅವರ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಿದೆ.

ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಅದು ಕನಸಾಗಿಯೇ ಉಳಿದಿತ್ತು. ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ ಎಂದಿದ್ದಾರೆ ಪುನೀತ್.

ಡಾ.ರಾಜ್‌ಕುಮಾರ್ ಬಂಧುಗಳೊಂದಿಗೆ, ಒಡನಾಡಿಗಳೊಂದಿಗೆ ಕಳೆದ ಅಪರೂಪದ ಭಾವಚಿತ್ರಗಳು ಪುಸ್ತಕದಲ್ಲಿ ಸ್ಥಾನ ಪಡೆದಿವೆ. ಅತ್ಯಂತ ಅಪರೂಪದ 4 ಸಾವಿರ ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳನ್ನು ಬಿಂಬಿಸಲಾಗಿದೆ.

ಪುನೀತ್‌ರ ಪುಸ್ತಕ ಅಪರೂಪದಲ್ಲೇ ಅಪರೂಪ ಎನ್ನುವ ರಾಜಣ್ಣನ ಭಾವಚಿತ್ರಗಳನ್ನು ಪ್ರಕಟಿಸಿದೆ. ಇದಕ್ಕಾಗಿ ರಾಜ್ ಅಭಿಮಾನಿಗಳು, ಆಪ್ತರು ತಮ್ಮ ಸಂಗ್ರಹದಲ್ಲಿರುವ ಭಾವಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಒಟ್ಟಿನಲ್ಲಿ ಈ ಪುಸ್ತಕ ರಾಜ್ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನು ಪರಿಚಯಿಸಲಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X