»   » ಆಪ್ತ ಸಹಾಯಕನ ಮದುವೆಗೆ ಹಾಸನಕ್ಕೆ ಬಂದ ಅಮೀರ್

ಆಪ್ತ ಸಹಾಯಕನ ಮದುವೆಗೆ ಹಾಸನಕ್ಕೆ ಬಂದ ಅಮೀರ್

Posted By:
Subscribe to Filmibeat Kannada

ಬಾಲಿವುಡ್ ನ ಜನಪ್ರಿಯ ನಟ ಅಮೀರ್ ಖಾನ್ ಸೋಮವಾರ(ಮೇ.24) ಇದ್ದಕ್ಕಿದ್ದಂತೆ ಹಾಸನದಲ್ಲಿ ಪ್ರತ್ಯಕ್ಷರಾಗಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು. ಅವರು ತಮ್ಮ ಆಪ್ತಸಹಾಯಕ ಸುಧಾಕರ್ ಮದುವೆಗಾಗಿ ಹಾಸನಕ್ಕೆ ಆಗಮಿಸಿದ್ದರು. ಆದರೆ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ಮಾತ್ರ ಬಿದ್ದಅವರು ಮಾತಿಗೆ ಸಿಗದೆ ತರಾತುರಿಯಲ್ಲಿ ಮದುವೆ ಮುಗಿಸಿಕೊಂಡು ಹೊರಟೇ ಬಿಟ್ಟರು.

ಕುಷೇಗೌಡ ಎಂಬುವವರ ಮಗ ಸುಧಾಕರ್ ಮದುವೆ ಚನ್ನರಾಯಪಟ್ಟ್ಟಣದಲ್ಲಿ ನಡೆಯಿತು. ಅಮೀರ್ ತಮ್ಮ ಪತ್ನಿ ಕಿರಣ್ ರಾವ್ ಸಮೇತ ಹಾಸನಕ್ಕೆ ಆಗಮಿಸಿದ್ದರು. ಮದುಮಗನಿಗೆ ಮದುವೆ ಶುಭಾಶಯಗಳನ್ನು ತಿಳಿಸಿ ಅಲ್ಲಿಂದ ಆದಷ್ಟು ಬೇಗ ಕಾಲುಕಿತ್ತರು. ಭಾನುವಾರ ರಾತ್ರಿಯೂ ಅಮೀರ್ ತಮ್ಮ ಪತ್ನಿ ಜೊತೆ ಮದುವೆಗೆ ಬಂದಿದ್ದರು ಎಂದು ವಧು ಮಮತಾತಾ ತಿಳಿಸಿದ್ದಾರೆ.

ಅಮೀರ್ ಹಾಗೂ ಅವರ ಕುಟುಂಬದ ಜೊತೆಗೆ ನಮಗೆ ಬಾಲ್ಯದಿಂದಲೂ ಒಡನಾಟವಿದೆ ಎಂದು ಕುಷೇಗೌಡ ಹೇಳಿದ್ದಾರೆ. ಹಾಸನದಲ್ಲಿ ಚಾಕಲೇಟ್ ಹೀರೋನನ್ನು ನೋಡಲು ಜನ ಮುಗಿಬಿದ್ದಿದ್ದರು. ಇಂದು ಮದುವೆಗೂ ಆಗಮಿಸಿ ಮದುಮಗ ಸುಧಾಕರನಿಗೆ ಒಲವಿನ ಉಡುಗೊರೆ ಕೊಟ್ಟು ಶುಭ ಹಾರೈಸಿ ಅಮೀರ್ ದಂಪತಿಗಳು ಪ್ರೇಕ್ಷಕರತ್ತ ಕೈಬೀಸಿ ಹೊರಟು ಹೋದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada