»   » ದೇಹದಾನಕ್ಕೆ ಮುಂದಾದ ಐಟಂ ಗರ್ಲ್ ಫ್ಲೋರಾ ಶೈನಿ

ದೇಹದಾನಕ್ಕೆ ಮುಂದಾದ ಐಟಂ ಗರ್ಲ್ ಫ್ಲೋರಾ ಶೈನಿ

Posted By:
Subscribe to Filmibeat Kannada

ಕನ್ನಡದ 'ವಿಸ್ಮಯ ಪ್ರಣಯ' ಎಂಬ ಚಿತ್ರದಲ್ಲಿ ಅಭಿನಯಿಸಿ ಗಾಂಧಿನಗರದಿಂದ ಮಾಯವಾದ ಬೆಡಗಿ ಮಯೂರಿ ಅಲಿಯಾಸ್ ಫ್ಲೋರಾ ಶೈನಿ ಅಲಿಯಾಸ್ ಆಶಾ ಶೈನಿ ಮತ್ತೆ ಸುದ್ದಿ ಮಾಡಿದ್ದಾರೆ. ಆದರೆ ಈ ಬಾರಿ ಸುದ್ದಿ ಮಾಡಿರುವುದು ಯಾವುದೇ ಚಿತ್ರಕ್ಕೆ ಸಹಿ ಹಾಕುವ ಮೂಲಕ ಅಲ್ಲ. ದೇಹದನ ಮಾಡುವ ಮೂಲಕ.

"ಈಗಾಗಲೆ ನೇತ್ರದಾನದ ಪತ್ರಕ್ಕೆ ಸಹಿಹಾಕಿದ್ದೇನೆ. ಏಕೆಂದರೆ ನಾನು ಸತ್ತ ಬಳಿಕ ನನ್ನ ಕಣ್ಣುಗಳು ಜೀವಂತವಾಗಿರಬೇಕು. ಮತ್ತೊಬ್ಬರ ಬಾಳಿನಲ್ಲಿ ಬೆಳಕಾಗಬೇಕು. ಹಾಗೆಯೇ ಯಾವುದಾದರೂ ನೋಂದಾಯಿತ ಸರ್ಕಾರೇತರ ಸಂಸ್ಥೆ ಸಿಕ್ಕಿದರೆ ನನ್ನ ಉಳಿದ ಅವಯವಗಳನ್ನು ದಾನ ಮಾಡುತ್ತೇನೆ. ಇಡೀ ನನ್ನ ದೇಹವನ್ನೇ ದಾನ ಮಾಡಲು ಮುಂದಾಗಿದ್ದೇನೆ" ಎಂದಿದ್ದಾರೆ.

ಸದ್ಯಕ್ಕೆ ಫ್ಲೋರಾ ಶೈನಿ ಹಿಂದಿಯ 'ಯಾ ರಬ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಷ್ಟು ದಿನ ದಕ್ಷಿಣದಲ್ಲಿ ಐಟಂ ಪಾತ್ರಗಳಿಂದ ಗುರುತಿಸಿಕೊಂಡಿದ್ದ ಆಶಾ ಈಗ ಬಾಲಿವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಂದಹಾಗೆ 'ಧಿಮಾಕು' ಚಿತ್ರದಲ್ಲಿ ಅತ್ತೆ ಪಾತ್ರವನ್ನೂ ಪೋಷಿಸಿದ್ದರು ಶೈನಿ. (ಏಜೆನ್ಸೀಸ್)

English summary
Bollywood actress Flora Saini aka Asha Saini wants to donate her body. I am waiting for some government agency or recognised NGO to help me in pledging my other organs said the actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada