For Quick Alerts
ALLOW NOTIFICATIONS  
For Daily Alerts

ಸಂಕಷ್ಟದಲ್ಲಿ ಪ್ರೇಮ ಲೋಕ ಜೂಹಿ ಚಾವ್ಲಾ ಫ್ಯಾಮಿಲಿ

By Rajendra
|

ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಪ್ರೇಮಲೋಕ' ಕಟ್ಟಿದ ಜೂಹಿ ಚಾವ್ಲಾ ಮನೆಯಲ್ಲೀಗ ನೀರವ ಮೌನ. ಆಕೆಯ ಪ್ರೀತಿ ಪಾತ್ರದ ಅಣ್ಣಬಾಬ್ಬಿ ಕೋಮಾ ಹಂತದಲ್ಲಿದ್ದಾರೆ. ಕಳೆದ ವರ್ಷ ತೀವ್ರ ಪಾರ್ಶ್ವವಾಯು ಹೊಡೆತಕ್ಕೆ ಅವರು ಸಿಕ್ಕಿದ್ದರು. ಈ ನೋವು ಜೂಹಿ ಅವರನ್ನು ತೀವ್ರವಾಗಿ ಭಾದಿಸುತ್ತಿದೆ.

"ನಾಲ್ಕು ತಿಂಗಳ ಬಳಿಕ ಅಂಬಾನಿ ಆಸ್ಪತ್ರೆಗೆ ಬರುತ್ತಿದ್ದೇನೆ. ನನ್ನ ಅಣ್ಣನನ್ನು ಕಣ್ಣಾರೆ ನೋಡಿ ಮತ್ತಷ್ಟು ದುಃಖಪಡುವುದು ಬೇಡ ಎಂದು ವೈದ್ಯರ ಬಳಿ ಅವನ ಆರೋಗ್ಯದ ಬಗ್ಗೆ ವಿಚಾರಿಸಿದೆ." ಎಂದು ಜೂಹಿ ಟ್ವಿಟ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವನ್ನು ಹೊರಗೆ ಹಾಕಿದ್ದಾರೆ.

"ನನ್ನ ಅಣ್ಣ ಈಗಲೂ ಐಸಿಯುನಲ್ಲಿದ್ದಾನೆ. ಆಸ್ಪತ್ರೆಯ ಕೆಳಮಹಡಿಯ ಪ್ರಾರ್ಥನಾ ಮಂದಿರದಲ್ಲಿ ಕೂತಾಗ ಕಣ್ಣೀರು ಕಟ್ಟೆಯೊಡೆಯಿತು.ಅವನು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಬೇಡಿಕೊಂಡೆ. ಅವನನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಜೂಹಿ ಕಣ್ಣೀರಾಗಿದ್ದಾರೆ.

ಅಂದಹಾಗೆ ಜೂಹಿ ಅವರ ಅಣ್ಣ ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮಾಡುತ್ತಿರಬೇಕಾದರೆ ಪಾರ್ಶ್ವವಾಯುಗೆ ತುತ್ತಾಗಿದ್ದರು.

"ಅತ್ತ ಸಾಯಲು ಆಗದೆ ಇತ್ತ ಬದುಕಲೂ ಆಗದ ಸ್ಥಿತಿಯಲ್ಲಿ ದೇವರು ಅವನನ್ನು ಬಿಟ್ಟಿದ್ದೇಕೆ? ಸಾಧ್ಯವಾದರೆ ದೇವರು ಅವನನ್ನು ಮುಂಚಿನಂತೆ ಮಾಡಲಿ. ಇಲ್ಲ ಕರೆದೊಯ್ಯಲಿ " ಎಂದು ತೀವ್ರ ಮನನೊಂದು ನುಡಿದಿದ್ದಾರೆ ಜೂಹಿ. ಪ್ರೇಮ ಲೋಕ, ಶಾಂತಿ ಕ್ರಾಂತಿ ಹಾಗೂ ಕಿಂದರಿ ಜೋಗಿ ಚಿತ್ರಗಳಲ್ಲಿ ಜೂಹಿ ಕನ್ನಡದಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Bollywood actress Juhi Chawla's elder brother Bobby, who has been in a coma since suffering a massive stroke last year. "I have come to the Ambani hospital after four months to meet a doctor… But I just have not the nerve to go see my brother, " Juhi posted on her Twitter page.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more