»   »  ಸೆಲ್ಯೂಟ್ ಚಿತ್ರದ ವಿತರಕರಾಗಿ ಬಿ ಸಿ ಪಾಟೀಲ್

ಸೆಲ್ಯೂಟ್ ಚಿತ್ರದ ವಿತರಕರಾಗಿ ಬಿ ಸಿ ಪಾಟೀಲ್

Posted By:
Subscribe to Filmibeat Kannada

ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ತಮ್ಮದೇ ಸೆಲ್ಯೂಟ್ ಚಿತ್ರಕ್ಕೆ ವಿತರಕರಾಗಿಯೂ ಬದಲಾಗಿದ್ದಾರೆ! ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸೆಲ್ಯೂಟ್ ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ಹಿರೇಕೆರೂರಿನಲ್ಲಿ ಪಾಟೀಲರು ದಿನಪತ್ರಿಕೆಯನ್ನೂ ಆರಂಭಿಸಿದ್ದಾರೆ. ಇದೀಗ ತಮ್ಮ ಚಿತ್ರದ ವಿತರಕರಾಗಿಯೂ ಪಾಟೀಲ್ ಹೊಸ ಜವಾಬ್ದಾರಿಯನ್ನು ಹೊತ್ತಿರುವುದು ವಿಶೇಷ. ಸೆಲ್ಯೂಟ್ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂದು ಅವರ ಆರನೇ ಇಂದ್ರಿಯಕ್ಕೆ ಅದಾಗಲೇ ಸುಳಿವು ಸಿಕ್ಕಿದೆಯಂತೆ.

ಹುಬ್ಬಳ್ಳಿ, ದಾವಣಗೆರೆ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಪಾಟೀಲರು ಬಹಳಷ್ಟು ಜನಪ್ರಿಯ. ಹಾಗಾಗಿ ಈ ಜಿಲ್ಲೆಗಳಲ್ಲಿ ಸೆಲ್ಯೂಟ್ ವಿತರಕರು ಅವರೇ. ತಮ್ಮ ನಿರ್ಮಾಣ, ನಿರ್ದೇಶನದ ಚಿತ್ರಕ್ಕೆ ಪಾಟೀಲರು ವಿತರಕರಾಗುತ್ತಿರುವುದು ಇದೇ ಮೊದಲು. ಅವರದೇ ಆತ್ಮಕತೆಯನ್ನು ಸೆಲ್ಯೂಟ್ ಮೂಲಕ ಪಾಟೀಲರು ತೆರೆಗೆ ತರುತ್ತಿದ್ದಾರೆ. ಖಾಕಿ ಮತ್ತು ಖಾದಿ ನಡುವಿನ ಘರ್ಷಣೆಯೇ ಚಿತ್ರದ ಕಥಾವಸ್ತು.

ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಸೆಲ್ಯೂಟ್ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಪಾಟೀಲರಿಗೆ ನಾಯಕಿಯಾಗಿ ಅಶ್ವಿನಿ ಅಭಿನಯಿಸುತ್ತಿದ್ದಾರೆ. ಅವರದು ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿ ಪಾತ್ರವಂತೆ. ವಿಜಯ್ ಕೌಂಡಿಣ್ಯ ಅವರ ಸಾಹಸ ಮೈನವಿರೇಳಿಸುವಂತಿದೆ. ಚಿತ್ರದಲ್ಲಿ ಎಸ್ ಪ್ರಕಾಶ್ ಗೃಹ ಸಚಿವರಾಗಿ ಕಾಣಿಸಲಿದ್ದಾರೆ ಎನ್ನುತ್ತಾರೆ ಪಾಟೀಲರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada