twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯ ಪನೋರಮಾಕ್ಕೆ ಸಿನಿಮಾ ಬೆಟ್ಟದ ಜೀವ

    |

    Bettada Jiva Image
    ರಾಷ್ಟ್ರಪ್ರಶಸ್ತಿ ಪಡೆದಿರುವ ಚಿತ್ರ "ಬೆಟ್ಟದ ಜೀವ" ಇದೀಗ ಭಾರತೀಯ ಪನೋರಮಾಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ಗರಿ ಮೂಡಿಸಿಕೊಂಡಿದೆ. ಈ ಚಿತ್ರದ ನಿರ್ದೇಶಕರು ಪಿ. ಶೇಷಾದ್ರಿ. ನಿರ್ಮಾಪಕರು ಬಸಂತ್ ಕುಮಾರ್ ಪಾಟೀಲ್. ಕಲಾತ್ಮಕ ಸಿನಿಮಾ ಎಂಬ ಹಣೆಪಟ್ಟಿ ಬೆಟ್ಟದ ಜೀವಕ್ಕೆ.

    ಮುಂದಿನ ತಿಂಗಳು ನವೆಂಬರ್ 23 ರಿಂದ ಗೋವಾದ ಪಣಜಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನವಾಗಲಿದೆ. ಈ ವರ್ಷ ಕೇವಲ 'ಬೆಟ್ಟದ ಜೀವ' ಚಿತ್ರ ಮಾತ್ರ ಆಯ್ಕೆ ಆಗಿದೆ. ಕಳೆದ ವರ್ಷ ನಾಲ್ಕು ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆ ಆಗಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕಾದಂಬರಿ 'ಬೆಟ್ಟದ ಜೀವ' ಈ ಚಿತ್ರಕ್ಕೆ ಆಧಾರ ಸ್ಥಂಭ. ದತ್ತಣ್ಣ, ಸುಚೇಂದ್ರ ಪ್ರಸಾದ್ ಹಾಗೂ ಲಕ್ಷ್ಮೀ ಹೆಗಡೆ ತಾರಾಗಣದಲ್ಲಿರುವ ಪ್ರಮುಖರು. ಮನಮುಟ್ಟುವ ನಿರೂಪಣೆ ಮತ್ತು ಅಭಿನಯವೇ ಈ ಚಿತ್ರದ ಜೀವಾಳ. ಇದೀಗ ಪನೋರಮಾಕ್ಕೆ ಆಯ್ಕೆ, ಕನ್ನಡಕ್ಕೆ ಕಾಣಿಕೆ.

    ಸ್ಪರ್ಧೆಯಲ್ಲಿದ್ದ ಒಟ್ಟೂ ಚಿತ್ರಗಳು 118. ಅವುಗಳಲ್ಲಿ ಪನೋರಮಾಕ್ಕೆ ಆಯ್ಕೆಯಾದ ಭಾರತೀಯ ಚಿತ್ರಗಳು 23. ಕನ್ನಡ ಚಿತ್ರ ಪಿ. ಶೇಷಾದ್ರಿಯ ಬೆಟ್ಟದ ಜೀವ ಮಾತ್ರ. ಯಾಕೆ ಹೀಗೆ ಎಂಬ ಯಕ್ಷ ಪ್ರಶ್ನೆಗೆ 'ಎಲ್ಲ ವರ್ಷವೂ 2010 ಅಲ್ಲ' ಎಂಬ ಉತ್ತರ ಕಲಾತ್ಮಕ ಚಿತ್ರಗಳ ನಿರ್ಮಾಪಕ, ನಿರ್ದೇಶಕರಿಂದ ಬಂದರೆ ಆಶ್ಚರ್ಯವಿಲ್ಲ!

    English summary
    National award winning Bettada Jeeva directed by well known director P.Sheshadri for producer Basanth Kumar Patil has been selected for the Indian Panorama. The movie will be screened at the International Film Festival to be held in Panaji starting November 23.
 
    Monday, October 24, 2011, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X