»   »  ರಿಮೇಕ್ ಚಿತ್ರ ಪುತ್ರದಲ್ಲಿ ದಿಗಂತ್, ಶುಭಾ ಜೋಡಿ

ರಿಮೇಕ್ ಚಿತ್ರ ಪುತ್ರದಲ್ಲಿ ದಿಗಂತ್, ಶುಭಾ ಜೋಡಿ

Subscribe to Filmibeat Kannada

ವಿಪರ್ಯಾಸದ ಸಂಗತಿಯೆಂದರೆ, ದಿಗಂತ್ ನಟನೆಯ ಪುತ್ರ ಚಿತ್ರ ಕೂಡ ರಿಮೇಕ್ ಪಟ್ಟಿಗೆ ಸೇರ್ಪಡೆಯಾಗಲಿದೆ. ತಮಿಳಿನ ಎಮ್ ಮಗನ್ ಚಿತ್ರದ ಕನ್ನಡ ಅವತರಣಿಕೆ ಪುತ್ರ. ಇದಕ್ಕೆ ಸದಭಿರುಚಿಯ ಚಿತ್ರ ನೀಡಿದ ವಿ ಉಮಾಕಾಂತ್ ನಿರ್ದೇಶನದ ನೊಗ ಹೊತ್ತಿದ್ದಾರೆ.

ತಂದೆ ಮಗನ ಸಂಬಂಧ ಜನುಮಜನುಮಗಳ ಅನುಬಂಧ. ಅದರಲ್ಲೂ ಶ್ರೀರಾಮನಂಥ ಪಿತೃವಾಕ್ಯ ಪರಿಪಾಲಕ ಅವತರಿಸಿದ ಭೂಮಿ ಇದು. ಇಂಥಹ ಪವಿತ್ರ ಬಾಂಧವ್ಯದಲ್ಲಿರುವ ವಾತ್ಸಲ್ಯವನ್ನು ಸಿನೆಮಾ ಮೂಲಕ ತೋರಿಸಲು ಹೊರಟ್ಟಿದ್ದಾರೆ ರೋಸ್ ಪ್ರೊಡಕ್ಷನ್ಸ್ ಸಂಸ್ಥೆಯವರು. ಈ ವಾತ್ಸಲ್ಯಭರಿತ ಕಥಾನಕಕ್ಕೆ ಪುತ್ರ' ಎಂದು ನಾಮಕರಣ ಮಾಡಿರುವ ನಿರ್ಮಾಪಕರು ಕಳೆದವಾರ ಚಿತ್ರದ ಮುಹೂರ್ತ ಸಮಾರಂಭವನ್ನು ಸರ್ಜಾಪುರದ ಬಳಿಯ ಶ್ರೀರಾಮ ದೇವಾಲಯದಲ್ಲಿ ಸರಳವಾಗಿ ಆಚರಿಸಿದ್ದಾರೆ.

ಸಿಜಿಎ ಪಾಲ್ ಅರ್ಪಿಸಿ ಪೀಟರ್ ಜೋಸಫ್ ಹಾಗೂ ಆಂಥೋನಿ ಪಾಲ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಬೆಡಗಿ ಶುಭಾ ಪುಂಜಾ ಪುತ್ರ'ನ ಪ್ರೇಯಸಿಯಾಗಿ ನಟಿಸುತ್ತಿದ್ದಾರೆ. ಅವಿನಾಶ್, ಮಾಳವಿಕ, ಸುಂದರರಾಜ್, ಟೆನ್ನಿಸ್ ಕೃಷ್ಣ ಅವರಂಥ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ.

ಆದರೆ, ವಿಪರ್ಯಾಸದ ಸಂಗತಿಯೆಂದರೆ, ಈ ಚಿತ್ರ ಕೂಡ ರಿಮೇಕ್ ಪಟ್ಟಿಗೆ ಸೇರ್ಪಡೆಯಾಗಲಿದೆ. ಭರತ್ ಮತ್ತು ಗೋಪಿಕಾ ನಟಿಸಿದ್ದ ತಮಿಳು ಚಿತ್ರ 'ಎಮ್ ಮಗನ್' ಚಿತ್ರದ ಕನ್ನಡ ಅವತರಣಿಕೆ ಈ ಪುತ್ರ.

ಮದುವೆ', ಮಿ.ಪುಟ್ಸಾಮಿ', ಅನುರಾಗ ಸಂಗಮ' ಚಿತ್ರಗಳು ಸೇರಿದಂತೆ 11 ಚಿತ್ರಗಳನ್ನು ನಿರ್ದೇಶಿಸಿರುವ ವಿ.ಉಮಾಕಾಂತ್ ಪುತ್ರ'ನಿಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳು ಅಡಕವಾಗಿದ್ದು, 50 ದಿನಗಳಲ್ಲಿ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ವಿದ್ಯಾಸಾಗರ್, ರಮೇಶ್‌ರಾಜ್ ಸಂಗೀತ, ರವಿಸುವರ್ಣ ಸಂಕಲನ, ರಾಂನಾರಾಯಣ್ ಗೀತ ರಚನೆ, ರಾಮಣ್ಣ ನಿರ್ಮಾಣ ನಿರ್ವಹಣೆ ಹಾಗೂ ಸತ್ಯನಾರಾಯಣರ ಮೇಲ್ವಿಚಾರಣೆಯಿರುವ ಈ ಚಿತ್ರ ಕರ್ನಾಟಕದಲ್ಲಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಳ್ಳಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada