»   » ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಈಗ ಮಾಸ್ ಹೀರೋ

ಫೈಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಈಗ ಮಾಸ್ ಹೀರೋ

Posted By:
Subscribe to Filmibeat Kannada
Fight Master Diffrent Danny
'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮೂಲಕ ಸ್ಟಂಟ್ ಮಾಸ್ಟರ್ ಆಗಿ ಕನ್ನಡಕ್ಕೆ ಎಂಟ್ರಿ ಕೊಟ್ಟ ಡ್ಯಾನಿ ಶೀಘ್ರದಲ್ಲೆ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ನಾಯಕ ನಟ ಕೂಡ ಅವರೇ ಆಗಿದ್ದು ಮತ್ತೊಬ್ಬ ಮಾಸ್ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

'ದುನಿಯಾ' ಚಿತ್ರಕ್ಕೆ ಡ್ಯಾನಿ ಸಂಯೋಜಿಸಿದ ಸಾಹಸ ಸನ್ನಿವೇಶಗಳು ಡಿಫರೆಂಟ್ ಆಗಿದ್ದ ಕಾರಣ ಅವರ ಹೆಸರು ಅಲ್ಲಿಂದ ಡಿಫರೆಂಟ್ ಡ್ಯಾನಿ ಆಗಿ ಬದಲಾಯಿತು. ದುನಿಯಾ ಚಿತ್ರ ಬಾಕ್ಸಾಫೀಸಲ್ಲಿ ಗೆಲ್ಲಲು ವೈವಿಧ್ಯಭರಿತವಾಗಿದ್ದ ಫೈಟ್ಸ್ ಕೂಡ ಒಂದು ಕಾರಣ ಎನ್ನಬಹುದು.

ಡ್ಯಾನಿ ನಿರ್ದೇಶಿಸಲಿರುವ ಚಿತ್ರಕ್ಕೆ 'ಢಿ' ಎಂದು ಹೆಸರಿಡಲಾಗಿದ್ದು 'ಫರ್ ಎ ಚೇಂಜ್' ಎಂಬ ಅಡಿಬರಹನ್ನು ನೀಡಲಾಗಿದೆ. ನಿರ್ದೇಶನ ಹಾಗೂ ನಟನೆಯ ಜೊತೆಗೆ ಕತೆ, ಚಿತ್ರಕತೆಯ ಜವಾಬ್ದಾರಿಯನ್ನು ಡ್ಯಾನಿ ಅವರೇ ಹೊತ್ತಿರುವುದು ವಿಶೇಷ.

ಶೀಘ್ರದಲ್ಲೆ ಶೂಟಿಂಗ್ ಆರಂಭವಾಗಲಿರುವ ಈ ಚಿತ್ರದ ಕತೆಯನ್ನು ಕೇಳಿ ನಾಲ್ಕು ಮಂದಿ ನಿರ್ಮಾಪಕರು ಮುಂದೆ ಬಂದಿದ್ದಾರಂತೆ. ಆದರೆ ನಾಲ್ಕು ಮಂದಿಯಲ್ಲಿ ಯಾರಿಗೆ ಚಿತ್ರ ನಿರ್ಮಾಣದ ಜವಾಬ್ದಾರಿ ನೀಡಬೇಕು ಎಂಬುದು ಇನ್ನೂ ತೀರ್ಮಾನಿಸಿಲ್ಲ ಎಂದಿದ್ದಾರೆ ಡ್ಯಾನಿ. (ಒನ್‌ಇಂಡಿಯಾ ಕನ್ನಡ)

English summary
The popular action director of Kannada films Different Danny - he is different because he gives the tools available in the surroundings of action where it happening - is now becoming mass hero with his movie titled as Dhee-For A Change.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada