»   »  ಮಯೂರ್ ಮುನಿಯಾ; ಹೇಮಂತ್ ಹೌಸ್ ಫುಲ್ ತೆರೆಗೆ

ಮಯೂರ್ ಮುನಿಯಾ; ಹೇಮಂತ್ ಹೌಸ್ ಫುಲ್ ತೆರೆಗೆ

Posted By:
Subscribe to Filmibeat Kannada

ಎರಡುವರೆ ಕೋಟಿ ಬಜೆಟ್ ನಲ್ಲಿ ಸದ್ಗುರು ಎಂಟರ್ ಟೈನರ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಮಯೂರ್ ಪಟೇಲ್ ಅಭಿನಯದ 'ಮುನಿಯಾ' ಇಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಚಿತ್ರದ ಮೂಲಕಅಪ್ಪಟ ಕನ್ನಡತಿ ಸಾಹಿತ್ಯ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಹೊಸ ಪರಿಚಯವಾಗುತ್ತಿದ್ದಾರೆ.

ಚಿತ್ರದ ಬಗ್ಗೆ ತುಂಬಾ ಪ್ರೀತಿ, ನಂಬಿಕೆ ಮತ್ತು ಕನಸು ಕಟ್ಟಿಕೊಂಡಿರುವ ನಿರ್ದೇಶಕ ನಾಗಚಂದ್ರ ಪ್ರಕಾರ, ಚಿತ್ರದಲ್ಲಿ ಎಲ್ಲಾ ಎಲಿಮೆಂಟ್ಸ್ ಗಳಿವೆಯಂತೆ. ಆಕ್ಷನ್, ಫೀಲ್ ಜತೆ ನವಿರಾದ ಪ್ರೇಮವಿದೆ. ಸಾಹಸ ವಿಭಿನ್ನವಾಗಿದ್ದರೂ ನಾಯಕನ ಕೈಗೆ ಮಚ್ಚು ಲಾಂಗ್ ಕೊಟ್ಟಿಲ್ಲವಂತೆ.ಹೀಗಿದ್ದುಕೊಂಡು ಪ್ರೇಕ್ಷಕ ಯಾವ ರೀತಿ ಸ್ವೀಕರಿಸುತ್ತಾರೋ ಎನ್ನುವ ಭಯ ಬೇರೆ ಇದೆ ಎನ್ನುತ್ತಾರೆ ನಿರ್ದೇಶಕ ನಾಗಚಂದ್ರ.

ಚಿತ್ರಕ್ಕೆ ತಾಜ್ ಮಹಲ್ ಖ್ಯಾತಿಯ ಅಭಿಮಾನ್ ಅವರ ಸಂಗೀತವಿದೆ. ಈ ಚಿತ್ರದ ಮೂಲಕ ಮುನಿರಾಜು ಗಾಂಧಿನಗರಕ್ಕೆ ಹೊಸ ನಿರ್ಮಾಪಕರಾಗಿ ಸೇರ್ಪಡೆಯಾಗಿದ್ದಾರೆ. ರವಿವರ್ಮ ಮತ್ತು ಡಿಫರೆಂಟ್ ಡ್ಯಾನಿಯವರ ಸಾಹಸ, ಮಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ, ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣದೆ.

ಈ ಚಿತ್ರದಲ್ಲಿ ರಂಗಾಯಣ ರಘು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. 'ಸಾಯೋಕೋ ಮನಸಿಲ್ಲ, ಬದುಕೋಕು ಇಷ್ಟವಿಲ್ಲ' ಎನ್ನುವ ಶೀರ್ಷಿಕೆಯಡಿ ಬಿಡುಗಡೆಗೊಳ್ಳುತ್ತಿರುವ 'ಮುನಿಯಾ' ನಿಗೆ ಪ್ರೇಕ್ಷಕ ಪ್ರಭುಒಲಿಯುತ್ತಾನೋ ಇಲ್ಲವೋ ಕಾದು ನೋಡಬೇಕು.

ಹೌಸ್ ಫುಲ್ ನಲ್ಲಿ ಚಾರ್ಲಿ ಚಾಪ್ಲಿನ್ ಇಲ್ಲ!
ತಮ್ಮ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಇರುತ್ತೆ, ತಮ್ಮ ಚಿತ್ರ ಗಿನ್ನಿಸ್ ದಾಖಲೆಗೆ ಸೇರುತ್ತೆ ಎಂದು ಹೇಳುವ ಮೂಲಕ ಪ್ರಚಾರದ ಗಿಮಿಕ್ ಪಡೆದ ಹೇಮಂತ್ ಹೆಗಡೆ ನಿರ್ದೇಶನದಹಾಸ್ಯ ಪ್ರಧಾನ ಚಿತ್ರ 'ಹೌಸ್ ಫುಲ್' . ಆದರೆ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಇಲ್ಲ ಎಂದು ಹೇಮಂತ್ ಸ್ಪಷ್ಟಪಡಿಸಿದ್ದಾರೆ.

ಮೆವಿರಿಕ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ, ನಿರ್ಮಾಪಕ ಅನೂಜ್ ಸಕ್ಸೇನಾ ಅವರು ನಿರ್ಮಾಪಕರಾಗಿರುವ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಅಶ್ಲೀಲತೆಯಾಗಲಿ ಅಥವಾ ಅಸಭ್ಯತೆಯಾಗಲಿ ಇಲ್ಲ ಎಂದು ಹೆಗಡೆ ಗ್ಯಾರಂಟಿ ನೀಡುತ್ತಾರೆ.

ನಟ ದಿಗಂತ್ ಮತ್ತು ಗಿರಿಜಾ ಓಕ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ರಾಜೇಶ್ ರಾಮನಾಥ್ ಅವರ ಸಂಗೀತವಿದೆ. '100% ಕಾಮಿಡಿ 0% ಬೋರು' ಎಂಬ ಅಡಿಬರಹ ದಡಿ ಬರುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭು ಯಾವರೀತಿ ಅಂಕಗಳನ್ನು ಕೊಡುತ್ತಾನೋ ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada