»   » ಜಯಮಾಲಾ ಪುತ್ರಿಗೆ ತೆಲುಗಿನಲ್ಲಿ ಭರ್ಜರಿ ಛಾನ್ಸ್

ಜಯಮಾಲಾ ಪುತ್ರಿಗೆ ತೆಲುಗಿನಲ್ಲಿ ಭರ್ಜರಿ ಛಾನ್ಸ್

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರಿಗೆ ತೆಲುಗಿನಲ್ಲಿ ಭರ್ಜರಿ ಛಾನ್ಸ್ ಸಿಕ್ಕಿದೆ. ಹೈದರಾಬಾದ್ ನ ರಾಮಾನಾಯ್ಡು ಸ್ಟುಡಿಯೋದಲ್ಲಿ 'ಮಿ.ಪ್ರೇಮಿಕುಡು' ಎಂಬ ಚಿತ್ರ ಸೆಟ್ಟೇರಿದ. ಈ ಚಿತ್ರದ ವಿಶೇಷವೆಂದರೆ ಚಿತ್ರದ ನಾಯಕ ನಟ ಮತ್ತೊಬ್ಬ ಕನ್ನಡಿಗ ಯಶೋ ಸಾಗರ್(ಉಲ್ಲಾಸಂಗಾ ಉತ್ಸಾಹಂಗಾ ಖ್ಯಾತಿಯ) ಜೊತೆ ಸೌಂದರ್ಯ ಅವರಿಗೆ ನಟಿಸುವ ಅವಕಾಶ ಸಿಕ್ಕಿರುವುದು.

ಇಬ್ಬರು ಕನ್ನಡಿಗರ ತೆಲುಗು ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಮನೋ ಅಭಿನವ್. ಚಿತ್ರದ ಬಗ್ಗೆ ಯಶೋ ಸಾಗರ್ ಮಾತನಾಡುತ್ತಾ, ತಮ್ಮ ಚೊಚ್ಚಲ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರ ಯಶಸ್ವಿಯಾದ ಬಳಿಕ ಉತ್ತಮ ಚಿತ್ರಕತೆಗಾಗಿ ಸಾಕಷ್ಟು ಸಮಯ ಕಾದೆ. ಕತೆ ಅಧ್ಬುತವಾಗಿದೆ ಹಾಗಾಗಿ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.

ಯಶೋ ಸಾಗರ್ ತಾವೊಬ್ಬ ಪ್ರತಿಭಾನ್ವಿತ ನಟ ಎಂಬುದು 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದ ಮೂಲಕ ತೋರಿಸಿದ್ದಾರೆ. ಯಶೋ ಸಾಗರ್ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಸೌಂದರ್ಯ ಗಿಟ್ಟಿಸುವ ಮೂಲಕ ತಮ್ಮ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಬಿದ್ದಂತಾಗಿದೆ.

ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗುತ್ತಿದೆ. ತೆಲುಗು ಪ್ರೇಕ್ಷಕರು ತಮ್ಮನ್ನು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವನ್ನು ಸೌಂದರ್ಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ರ 'ಲಗೋರಿ' ಚಿತ್ರದಲ್ಲಿ ಸೌಂದರ್ಯ ನಟಿಸಲಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಆದರೆ ಅದು ಹುಸಿಬಾಂಬ್ ಸ್ಫೋಟದಂತೆ ಠುಸ್ ಎಂದಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada