Just In
Don't Miss!
- News
ಅಧ್ಯಕ್ಷರಾಗಿ ಜೋ ಬೈಡನ್ ಮೊದಲ ಭಾಷಣದ ಮುಖ್ಯಾಂಶಗಳು
- Sports
ಐಪಿಎಲ್ 2021: ಎಲ್ಲಾ 8 ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಸಂಪೂರ್ಣ ಪಟ್ಟಿ
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಳ್ಳಿಪರದೆಗೆ ಮಾಜಿ ಡಾನ್ ಜೇಡರಹಳ್ಳಿ ಕೃಷ್ಣಪ್ಪ ಎಂಟ್ರಿ
ರೌಡಿಸಂಗೆ ಗುಡ್ ಬೈ ಹೇಳಿ ಈಗ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಎಚ್ ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ(ಜೆಕೆ) ತಮ್ಮ ದಾದಾಗಿರಿಯ ದಿನಗಳನ್ನು ತೆರೆಗೆ ತರುತ್ತಿದ್ದಾರೆ. ಚಿತ್ರದ ಹೆಸರು 'ಜೇಡರಹಳ್ಳಿ'. ಅವರ ದಾದಾಗಿರಿ ದಿನಗಳನ್ನು ಕುರಿತ ಸತ್ಯ ಘಟನೆಗಳ ಆಧಾರಿತ ಚಿತ್ರವಿದು. ನಾಯಕ ನಟನ ಪಾತ್ರಕ್ಕೆ ದುನಿಯಾ ವಿಜಯ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಕಡೆಗೆ ತಾವೇ ನಾಯಕ ನಟರಾಗುತ್ತಿದ್ದಾರೆ ಜೆಕೆ.
ಇತ್ತೀಚೆಗೆ ತೆರೆಕಂಡ '5 ಈಡಿಯಟ್ಸ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಜೇಡರಲ್ಲಿ ಕೃಷ್ಣಪ್ಪ ಕಾಣಿಸಿದ್ದರು. ಹರ್ಷಿಕಾ ಪೂಣಚ್ಚ ತಂದೆಯಾಗಿ ಅಭಿನಯಿಸಿದ್ದ ಜೆಕೆ ದಾರಿತಪ್ಪಿದ ಹುಡುಗರನ್ನು ಸರಿದಾರಿಗೆ ತರುವ ಪಾತ್ರವನ್ನು ಪೋಷಿಸಿದ್ದರು. ಈಗ 'ಜೇಡರಳ್ಳಿ' ಚಿತ್ರ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ. ಈ ಹಿಂದೆ ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ಜೆಕೆ ರೌಡಿಯಾಗಿ ಕಾಣಿಸಿಕೊಂಡಿದ್ದರು.
ಗಾಂಧಿನಗರದ ಮೂಲಗಳ ಪ್ರಕಾರ, '5 ಈಡಿಯಟ್ಸ್' ಹಾಗೂ 'ಅಂಬಾರಿ' ಚಿತ್ರಗಳಿಗೆ ಕೆ ಎಂ ಕೃಷ್ಣಮೂರ್ತಿ ಎಂಬ ಹೆಸರಲ್ಲಿ ಜೆಕೆ ಫೈನಾನ್ಸ್ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಜೆಕೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 'ಗುಬ್ಬಿ' ಚಿತ್ರದ ನಿರ್ದೇಶಕ ವಿಜಯ್ ಆಕ್ಷನ್, ಕಟ್‌ನಲ್ಲಿ ಚಿತ್ರ ಮೂಡಿಬರಲಿದೆ.