»   »  ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!

ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!

Subscribe to Filmibeat Kannada
Producer K Manju
ಬಣ್ಣ ಹಚ್ಚಿಕೊಳ್ಳಬೇಕು ಎಂಬ ನಿರ್ಮಾಪಕ ಕೆ ಮಂಜು ಅವರ ಕನಸು ನನಸಾಗಿದೆ. ಸುದೀಪ್ ಮತ್ತು ರಮ್ಯಾ ನಟಿಸುತ್ತಿರುವ ಹೊಸ ಚಿತ್ರ 'ಕಿಚ್ಚ ಹುಚ್ಚ'ದಲ್ಲಿ ಕೊಬ್ಬರಿ ಮಂಜು ಅವರಿಗೆ ಖಳನಟನ ಪಾತ್ರ ಸಿಕ್ಕಿದೆ! ಈ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸುತ್ತಿದ್ದು ಈಗಾಗಲೇ ಚಿತ್ರೋದ್ಯಮದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮೇ 11ರಂದು 'ಕಿಚ್ಚ ಹುಚ್ಚ' ಚಿತ್ರ ಮೈಸೂರಿನಲ್ಲಿ ಸೆಟ್ಟೇರಲಿದೆ. ಮೈಸೂರಿನಲ್ಲಿ 20 ದಿನಗಳ ಚಿತ್ರೀಕರಣ ಮುಗಿಸಿಕೊಂಡು ನಂತರ ಎರಡನೇ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಎರಡನೇ ಹಂತದ ಚಿತ್ರೀಕರಣ 25 ದಿನಗಳ ಕಾಲ ನಡೆಯಲಿದೆ. ಹೊರಾಂಗಣ ಚಿತ್ರೀಕರಣಕ್ಕೆ ಮೈಸೂರು ಹೇಳಿ ಮಾಡಿಸಿದಂತಹ ಸ್ಥಳ ಹಾಗಾಗಿ ಮೈಸೂರನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ಗುರುದತ್.

ತಮಿಳಿನ ಯಶಸ್ವಿ ಚಿತ್ರ 'ಚಿತ್ರಂ ಪೆಸುತಾಡಿ' ರೀಮೇಕ್ ಚಿತ್ರ ಇದಾಗಿದೆ. ಈಗಾಗಲೇ ಸುದೀಪ್ ನಟಿಸಿರುವ 'ಹುಚ್ಚ ' ಚಿತ್ರ ಮತ್ತು ಸುದೀಪ್ ಅಭಿಮಾನಿಗಳು ನೀಡಿರುವ 'ಕಿಚ್ಚ'ಎರಡೂ ಪದಗಳನ್ನು ಸೇರಿಸಿ 'ಕಿಚ್ಚ ಹುಚ್ಚ' ಎಂದು ನಾಮಕರಣ ಮಾಡಲಾಗಿದೆ. ತಮಿಳಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ್ದ 'ಸೇತು' ಚಿತ್ರ ಕನ್ನ್ನಡಕ್ಕೆ 'ಹುಚ್ಚ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ಸುದೀಪ್ ಗೆ ಉತ್ತಮ ಬ್ರೇಕ್ ನೀಡಿದ ಚಿತ್ರ. 'ಕಿಚ್ಚ ಹುಚ್ಚ'ನಾಗಿ ಬರುತ್ತ್ತಿದ್ದು ಸುದೀಪ್ ರನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ ಕಾದು ನೋಡಬೇಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೈರಸಿ ತಡೆಗಟ್ಟಿ ಇಲ್ಲ ಮುಷ್ಕರ ಎದುರಿಸಿ: ಕೆ.ಮಂಜು
ನಿರ್ಮಾಪಕ ಕೆ.ಮಂಜು ಹೇಳಿದ ಲಾಸು ಕಥೆ
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!
ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ
ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು
ಮೀಟ್ ದಿ ಪ್ರೆಸ್‌ನಲ್ಲಿ ಕಥೆಗಾರ ಮಂಜಣ್ಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada