»   »  ಪೂಜಾಗಾಂಧಿಗೆ ಕರ್ನಾಟಕ ಚಿತ್ರರಸಿಕರ ಪ್ರಶಸ್ತಿ

ಪೂಜಾಗಾಂಧಿಗೆ ಕರ್ನಾಟಕ ಚಿತ್ರರಸಿಕರ ಪ್ರಶಸ್ತಿ

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ನಟಿ ಪೂಜಾಗಾಂಧಿ ಹಾಗೂ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ಅವರಿಗೆ ಕರ್ನಾಟಕ ಚಿತ್ರರಸಿಕರ ಸಂಘದ ಪ್ರಶಸ್ತಿ ನೀಡಲಾಗಿದೆ. ಇತ್ತೀಚೆಗೆ ಬೆಂಗಳೂರು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಒಟ್ಟು 24 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಚಿತ್ರರಸಿಕರ ಸಂಘ ಮುವ್ವತ್ತನೇ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿತು. ಸಂಘದ ಅಧ್ಯಕ್ಷ ಎ ಆರ್ ರಾಜು ಅವರು ಈ ಬಗ್ಗೆ ಮಾಹಿತಿ ನೀಡಿದರು. ಪ್ರಣಯರಾಜ ಶ್ರೀನಾಥ್ ಅವರಿಗೆ ಸಂಘದ ಮುವ್ವತ್ತನೇ ವಾರ್ಷಿಕೋತ್ಸವದ ಪ್ರಶಸ್ತಿಯನ್ನು ನೀಡಲಾಯಿತು.

ರಾಜೇಶ್ ಕೃಷ್ಣ ಮತ್ತು ನಂದಿತಾ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ/ಗಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಗೀತ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಕ್ರಮವಾಗಿ ನಾಗೇಂದ್ರ ಪ್ರಸಾದ್ ಮತ್ತು ಗುರುಕಿರಣ್ ಅವರಿಗೆ ನೀಡಲಾಗಿದೆ.

ಅತ್ಯುತ್ತಮ ಚಿತ್ರ ಜೋಡಿ ಪ್ರಶಸ್ತಿಯು ಪಂಕಜ್ ಮತ್ತು ರೂಪಿಕಾ ಅವರ ಪಾಲಾಗಿದೆ. ಅತ್ಯುತ್ತಮ ನಿರ್ಮಾಪಕರಾಗಿ ಎಸ್ ವಿ ಬಾಬು ಅವರನ್ನು ಆಯ್ಕೆ ಮಾಡಲಾಗಿತ್ತು. ಡಿಫರೆಂಟ್ ಡ್ಯಾನಿ ಅವರಿಗೆ ಅತ್ಯುತ್ತಮ ಸಾಹಸ ಕಲಾವಿದ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಸಂಭಾಷಣೆಕಾರನಾಗಿ 'ಜೋಶ್' ಚಿತ್ರದ ನಿರ್ದೇಶಕ ಶಿವಮಣಿ ಆಯ್ಕೆಯಾಗಿದ್ದಾರೆ. ಬಹಳಷ್ಟು ಮಂದಿ ಪ್ರಶಸ್ತಿ ಸ್ವೀಕರಿಸಲು ಗೈರು ಹಾಜರಾಗಿದ್ದದ್ದು ಎ ಆರ್ ರಾಜು ಅವರನ್ನು ಖಿನ್ನಗೊಳಿಸಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada