»   » ಬಿಜಾಪುರದಲ್ಲಿ 'ಎಫ್ ಎಂ ರೇಡಿಯೋ'

ಬಿಜಾಪುರದಲ್ಲಿ 'ಎಫ್ ಎಂ ರೇಡಿಯೋ'

Posted By:
Subscribe to Filmibeat Kannada

ಗೋಲ್ಡನ್ ಲಯನ್ ಫಿಲಂಸ್ ಡಿವಿಜನ್ ಲಾಂಛನದಲ್ಲಿ ಸಿ.ಆರ್.ಮನೋಹರ್ ನಿರ್ಮಿಸುತ್ತಿರುವ 'ಎಫ್ ಎಂ ರೇಡಿಯೋ ಚಿತ್ರದ ಚಿತ್ರೀಕರಣ ಬಿಜಾಪುರದಲ್ಲಿ ಭರದಿಂದ ಸಾಗಿದೆ. ನಾಯಕ-ನಾಯಕಿಯ ಸ್ನೇಹ ಪ್ರೀತಿಗೆ ತಿರುಗಿದ ಸಮಯ. ನಾಯಕಿಯೊಂದಿಗೆ ಹೆಚ್ಚಿನ ಸಮಯ ಕಳೆಯುವ ನಾಯಕ. ಇದ್ದನ್ನೆಲ್ಲಾ ದೂರದಿಂದಲ್ಲೇ ಗಮನಿಸುತ್ತಿದ್ದ ನಾಯಕಿಯ ತಂದೆ. ಇಬ್ಬರ ಒಡನಾಟ ಹೆಚ್ಚಿರುವುದ್ದನ್ನು ಅರಿತ ಅವರು ನಾಯಕನಿಗೆ ಹೊಡೆದಾಟದ ಮೂಲಕ ಬುದ್ದಿ ಕಲಿಸುವಂತೆ ರೌಡಿಪಡೆಯೊಂದಕ್ಕೆ ಸೂಚಿಸುತ್ತಾರೆ.

ನಾಯಕಿಯ ಪಿತನ ಆಜ್ಞೆಯನ್ನು ಪಾಲಿಸಿದ ಆ ಪಡೆ ಸೇತುವೆಯ ಮೇಲೆ ನಡೆದು ಹೋಗುತ್ತಿದ್ದ ನಾಯಕನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತದೆ. ನಾಯಕನೂ ಅವರೊಂದಿಗೆ ಸೆಣೆಸಾಡುತ್ತಾನೆ. ಈ ಸಾಹಸ ಸನ್ನಿವೇಶವನ್ನು 'ಎಫ್ ಎಂ ರೇಡಿಯೋ' ಚಿತ್ರಕ್ಕಾಗಿ ನಿರ್ದೇಶಕ ಬಿ.ರಾಮಮೂರ್ತಿ ಬಿಜಾಪುರದ ಬಳಿಯ ಉಪ್ಪಾರಿ ಸೇತುವೆಯಲ್ಲಿ ಚಿತ್ರೀಕರಿಸಿಕೊಂಡರು. ಇಲ್ಲಿಯವರೆಗೂ ಈ ಸೇತುವೆಯ ಮೇಲೆ ಯಾವ ಚಿತ್ರದ ಚಿತ್ರೀಕರಣವೂ ನಡೆದಿಲ್ಲವಂತೆ. ನಾಯಕಿಯ ತಂದೆ ಪಾತ್ರಧಾರಿ ಜೈಜಗದೀಶ್, ನಾಯಕ ಗೋಪಿ ಹಾಗೂ ಸಹ ಕಲಾವಿದರು ಈ ಸನ್ನಿವೇಶದಲ್ಲಿ ಭಾಗವಹಿಸಿದ್ದರು.

ಜಿ.ಆರ್.ಶಂಕರ್ ಸಂಗೀತವಿರುವ ಈ ಚಿತ್ರಕ್ಕೆ ಸುರೇಶ್ ಬೈರಸಂದ್ರ ಅವರ ಛಾಯಾಗ್ರಹಣವಿದೆ, ನರಹಳ್ಳಿ ಜ್ಞಾನೇಶ್ ಸಂಕಲನ, ಇಸ್ಮಾಯಿಲ್ ಕಲೆ ಹಾಗೂ ಪ್ರಸಾದ್ ಅವರ ಸಹನಿರ್ದೇಶನ 'ಎಫ್ ಎಂ ರೇಡಿಯೋಚಿತ್ರದ ತಾರಾಬಳಗದಲ್ಲಿ ಉಳಿದ ತಾರಾಬಳಗದಲ್ಲಿ ಗೋಪಿಚಂದ್, ರಿಶಿಕ ಸಿಂಗ್, ಶ್ರೀನಿವಾಸಮೂರ್ತಿ, ವಿನಯಾಪ್ರಕಾಶ್, ಅಕ್ಷಯ್, ಜೈಜಗದೀಶ್, ಸುಧಾಬೆಳವಾಡಿ, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ ಹಾಗೂ ಹರೀಶ್‌ರಾಯ್ ಇದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada