ನೆಲಕಚ್ಚಿದ ಕೋ ಕೋ ಚಿತ್ರಕ್ಕೀಗ ಕತ್ತರಿ ಪ್ರಯೋಗ
ಪ್ರದರ್ಶನ ಕಾಣುತ್ತಿರುವ ಚಿತ್ರ ಆರ್ ಚಂದ್ರು ನಿರ್ದೇಶನದ 'ಕೋ ಕೋ' ಚಿತ್ರಕ್ಕೆ ಕತ್ತರಿ ಪ್ರಯೋಗವಾಗಿದೆ. ಕಾರಣ ಬಿಡುಗಡೆ ಪೂರ್ವದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಬಿಡುಗಡೆ ನಂತರ ಪ್ರೇಕ್ಷಕರು ಹಾಗೂ ವಿಮರ್ಶಕರ ಟೀಕೆಗೆ ಗುರಿಯಾಗಿತ್ತು. ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.
ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವುದು ಸಾಕಷ್ಟು ಕಡಿಮೆಯಾದಾಗ ಎಚ್ಚೆತ್ತಿರುವ ಚಿತ್ರತಂಡ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದೆ. ಮೊದಲಿನಂತೆ ಈಗ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಹರ್ಷಿಕಾ ಪೂಣಚ್ಚ ಅಭಿನಯದ ಹಾಡೊಂದು ಮಾಯವಾಗಿದೆ. ಜೊತೆಗೆ ಸಾಕಷ್ಟು ಉಳಿದ ಅನಾವಶ್ಯಕ ದೃಶ್ಯಗಳಿಗೂ ಕತ್ತರಿ ಬಿದ್ದಿದೆ.
ನಿರ್ದೇಶಕ ಚಂದ್ರು ಈ ಮೊದಲು ನಿರ್ದೇಶಿಸಿದ್ದ ತಾಜ್ ಮಹಲ್, ಮೈಲಾರಿ ಮುಂತಾದ ಚಿತ್ರಗಳು ಗೆದ್ದಾಗ ಪ್ರೇಕ್ಷಕರು ಹಾಗೂ ವಿಮರ್ಶಕರು ಬೆನ್ನು ತಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ಪ್ರೇಕ್ಷಕರ ನಿರೀಕ್ಷೆ ತಲುಪಲು ಚಂದ್ರು ವಿಫಲವಾದ ಹಿನ್ನಲೆಯಲ್ಲಿ ಚಿತ್ರ ಗೋತಾ ಹೊಡೆಯುವುದು ಖಚಿತವಾಗಿತ್ತು. ಈಗ ಟ್ರಿಮ್ ಆಗಿದೆ. ಕೋ ಕೋ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











