For Quick Alerts
  ALLOW NOTIFICATIONS  
  For Daily Alerts

  ಅಂಬರೀಷ್, ಮುನಿರತ್ನ ಬರಲಿಲ್ಲ; ತೀರ್ಪು ಮುಂದೂಡಿಕೆ

  |

  ಕಠಾರಿವೀರ ಹಾಗು ಗಾಡ್ ಫಾದರ್ ಚಿತ್ರಗಳ ಬಿಡುಗಡೆ ವಿಷಯದಲ್ಲಿ ಇದ್ದ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಇಂದು (24 ಏಪ್ರಿಲ್ 2012) ಕರೆಯಲಾಗಿದ್ದ ಸಭೆಯ ಅಂತಿಮ ತೀರ್ಮಾನ ನಾಡಿದ್ದು, ಅಂದರೆ 26 ಏಪ್ರಿಲ್ 2012 ರಂದು ಹೊರಬೀಳಲಿದೆ. ಇಂದಿನ ಸಭೆಗೆ ಹಿರಿಯ ನಟ ಅಂಬರೀಷ್ ಹಾಗೂ ಕಠಾರಿವೀರ ನಿರ್ಮಾಪಕ ಮುನಿರತ್ನ ಗೈರುಹಾಜರಾಗಿದ್ದರು.

  ಇಂದಿನ ಸಭೆಯಲ್ಲಿ ಸಮಸ್ಯೆಗೆ ಬಹುತೇಕ, ಶೇ 90 ರಷ್ಟು ಪರಿಹಾರ ಕಂಡುಕೊಳ್ಳಲಾಗಿದ್ದು ಅಂತಿಮ ತೀರ್ಮಾನ ಘೋಷಣೆಗೂ ಮೊದಲು ಅಂಬರೀಷ್ ಜೊತೆ ಚರ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ನಡೆದ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ವಿ, ಚಂದ್ರಶೇಖರ್, ನಟ ಉಪೇಂದ್ರ ಹಾಗೂ ಗಾಡ್ ಫಾದರ್ ನಿರ್ಮಾಪಕ ಕೆ ಮಂಜು ಹಾಜರಿದ್ದರು. ನಾಡಿದ್ದು ಬರುವ ಅಂತಮ ತೀರ್ಮಾನಕ್ಕೆ ತಾವು ಬದ್ಧರಾಗಿರುವುದಾಗಿ ಹಾಜರಿದ್ದ ಕೆ ಮಂಜು ಘೋಷಿಸಿದ್ದಾರೆ.

  ಸದ್ಯ ಯಾವುದೇ ತೀರ್ಮಾನ ಹೊರಬೀಳದ ಕಾರಣ ಉಪೇಂದ್ರರ ಯಾವ ಚಿತ್ರ ಮೊದಲು ಪ್ರೇಕ್ಷಕರೆದುರು ಬರಬಹುದೆಂಬ ಕುತೂಹಲ ಹಾಗೇ ಉಳಿದಿದೆ. ಜೊತೆಗೆ ವಾಣಿಜ್ಯ ಮಂಡಳಿ ಯಾರ ಪರವಾಗಿ ತೀರ್ಪು ನೀಡಿರಬಹುದೆಂಬ ಜಿಜ್ಞಾಸೆಯೂ ಇನ್ನೆರಡು ದಿನ ಜಾರಿಯಲ್ಲಿರುವಂತಾಗಿದೆ. 26ಕ್ಕೆ ಬರುವ ಅಂತಿಮ ತೀರ್ಪಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Movie Release Controversy took an uncompleted end. Ambarish and Munirathna are Absent for today's Meeting. So, decision postponed for day after tomorrow, on 26th April 2012. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X