»   »  ಮುಕ್ತಾಯ ಹಂತದಲ್ಲಿ ಉಪೇಂದ್ರರ ಶ್ರೀಮತಿ

ಮುಕ್ತಾಯ ಹಂತದಲ್ಲಿ ಉಪೇಂದ್ರರ ಶ್ರೀಮತಿ

Subscribe to Filmibeat Kannada
ಶ್ರೀಮತಿ ಚಿತ್ರ ಮಾತಿನ ಜೋಡಣೆ ಕಾರ್ಯವನ್ನು ಬಹುತೇಕ ಮುಗಿಸಿ ಕೊಂಡಿದೆ. ಎರಡು ಹಂತಗಳಲ್ಲಿ ಮಾತಿನ ಜೋಡಣೆ ಕಾರ್ಯವನ್ನು ಕೈಗೊಳ್ಳಲಾಗಿತ್ತು. ವಿದೇಶದಲ್ಲಿ ಕೆಲ ಹಾಡುಗಳ ಚಿತ್ರೀಕರಣ ಹಾಗೂ ಎರಡನೇ ಹಂತದ ಮಾತಿನ ಜೋಡಣೆ ಕಾರ್ಯದ ಕೊಂಚ ಭಾಗ ಮಾತ್ರ ಬಾಕಿ ಇದೆ. ಸಂಪತ್ ನಿರ್ದೇಶಿಸುತ್ತಿರುವ ಶ್ರೀಮತಿ ಚಿತ್ರಕ್ಕೆ ಉಪೇಂದ್ರ ಕತೆ,ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಪ್ರಿಯಾಂಕ ಉಪೇಂದ್ರ ಮತ್ತು ಸೆಲಿನಾ ಜೇಟ್ಲಿ ಚಿತ್ರದ ಇಬ್ಬರು ನಾಯಕಿಯರು. ಹಿಂದಿಯ ಐತ್ ರಾಜ್ ಚಿತ್ರದ ರೀಮೇಕ್ ಇದಾಗಿದ್ದು ಚಿತ್ರದಲ್ಲಿ ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ ಮತ್ತು ಕರೀನಾ ಕಪೂರ್ ನಟಿಸಿದ್ದರು. ಶ್ರೀಮತಿ ಚಿತ್ರದ ನಂತರ ರಜನಿ ಚಿತ್ರದಲ್ಲಿ ಉಪೇಂದ್ರ ತೊಡಗಿಕೊಳ್ಳಲಿದ್ದಾರೆ.

'ಶ್ರೀಮತಿ' ಹಲವು ವಿಶೇಷಗಳ ಸಾಗರ. ಹೆಚ್ ಟುಒ ಚಿತ್ರದ ನಂತರ ಉಪೇಂದ್ರ ತಮ್ಮ ಶ್ರೀಮತಿ ಪ್ರಿಯಾಂಕರೊಂದಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಮಿಸ್ ಇಂಡಿಯಾ' ಕಿರೀಟಧಾರಣೆ ಮಾಡಿಕೊಂಡು ಬಾಲಿವುಡ್‌ನ ಪ್ರಸಿದ್ಧ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ಸಹಜ ಸುಂದರಿ ಸೆಲಿನಾ ಜೆಟ್ಲಿ ಅವರು ಪ್ರಥಮ ಬಾರಿಗೆ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದು ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ
ಶ್ರೀಮತಿ ಚಿತ್ರಕ್ಕೆ ಸಹಿ ಹಾಕಿದ ಸೆಲೀನಾ ಜೇಟ್ಲಿ

Please Wait while comments are loading...