»   »  ಗೋಕುಲ ಪ್ರವೇಶಕ್ಕೆ ವಿಜಯರಾಘವೇಂದ್ರ ತಯಾರಿ

ಗೋಕುಲ ಪ್ರವೇಶಕ್ಕೆ ವಿಜಯರಾಘವೇಂದ್ರ ತಯಾರಿ

Subscribe to Filmibeat Kannada

ಖುಷಿ, ರಿಷಿ, ಮಿಲನದಂತಹ ಹಿಟ್ ಚಿತ್ರಗಳನ್ನು ಕನ್ನಡದ ಬೆಳ್ಳಿತೆರೆಗೆ ನೀಡಿದ ಪ್ರಕಾಶ್ ಅವರ ನಿರ್ಮಾಣ ನಿರ್ದೇಶನದ 'ಗೋಕುಲ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ನಿರಂತರವಾಗಿ ಚಿತ್ರೀಕರಣ ನಡೆಯುತ್ತಿದೆ. ಈಗ ಮಿಲ್ಕ್ ಕಾಲೋನಿಯಲ್ಲಿ ಅನಾಥ ಹುಡುಗರ ರೂಮ್‌ನ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಗೋಕುಲ ಪ್ರವೇಶಕ್ಕೆ ಅವರನ್ನು ತಯಾರಿಮಾಡಲಾಗುತ್ತಿದೆ.

ಹೆಸರಿಗೆ ತಕ್ಕಹಾಗೆ ಗೋಕುಲ ಎಂದರೆ ಹಳೇಕಾಲದ ಕೃಷ್ಣನ ವಿಗ್ರಹ ಇರುವಂತಹ ಮನೆ, ಸುತ್ತಲೂ ವನಸಿರಿ ಇದ್ದು, ಸೂಕ್ತವಾದ ಸ್ಥಳಕ್ಕಾಗಿ ನಿರ್ದೇಶಕ ಪ್ರಕಾಶ್ ಇನ್ನೂ ಹುಡುಕಾಟ ನಡೆಸಿದ್ದಾರೆ. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಇಲ್ಲೇ ನಡೆಯುತ್ತದೆ. ಅಭಯ್ ಸೂರ್ಯ ಕ್ರಿಯೇಷನ್ ಲಾಂಛನದಲ್ಲಿ ತಶ್ವಿನ್ ಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು, ನಿರ್ದೇಶಿಸುತ್ತಿದ್ದಾರೆ ಪ್ರಕಾಶ್.

ಮನೋಮೂರ್ತಿಯವರ ಸಂಗೀತ ಸಂಯೋಜನೆ, ಸತ್ಯ ಹೆಗಡೆಯವರ ಛಾಯಾಗ್ರಹಣ, ಎಂ.ಎಸ್. ರಮೇಶ್‌ರವರ ಸಂಭಾಷಣೆ, ಜಯಂತ್ ಕಾಯ್ಕಿಣಿ, ಧನಂಜಯರ ಸಾಹಿತ್ಯ, ರವಿವರ್ಮರ ಸಾಹಸ ಸಂಯೋಜನೆ ಇದ್ದು, ಜಿ. ಮಗೇಶ್, ಡಾ. ಸುರೇಶ್‌ಯಲ್ಲಪ್ಪ, ರಕ್ಷಿತ್ ಶಿವರಾಮ್ ಚಿತ್ರಕಥೆಯಲ್ಲಿ ನೆರವಾಗಿದ್ದಾರೆ. ವಿಜಯರಾಘವೇಂದ್ರ, ಪೂಜಾಗಾಂಧಿ, ಯಶ್, ನಕ್ಷತ್ರ, ಪವನ್, ರಘುರಾಜ್ ಹಾಗೂ ಶ್ರೀನಿವಾಸಮೂರ್ತಿ, ಸುಮಿತ್ರ ವೃದ್ಧ ದಂಪತಿಗಳಾಗಿ ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada