»   »  ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!

ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!

Posted By:
Subscribe to Filmibeat Kannada
'ದೊಡ್ಮನುಷ್ಯ' ಹೆಸರಿನ ಡಾ.ವಿಷ್ಣುವರ್ಧನ್ ರ ಹೊಸ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. 'ಯಜಮಾನ'ಖ್ಯಾತಿಯ ರೆಹಮಾನ್ ಅವರು 'ದೊಡ್ಮನುಷ್ಯ' ಚಿತ್ರವನ್ನು ನಿರ್ಮಿಸುತ್ತಿದ್ದು ಎಸ್.ನಾರಾಯಣ್ ನಿರ್ದೇಶಿಸಲಿದ್ದಾರೆ.

ಯಜಮಾನ ಚಿತ್ರದಲ್ಲಿ ವಿಷ್ಣು ಅಣ್ಣತಮ್ಮನ ದ್ವಿಪಾತ್ರದಲ್ಲಿ ನಟಿಸಿದ್ದರು. ದೊಡ್ಮನುಷ್ಯ ಚಿತ್ರದಲ್ಲೂ ವಿಷ್ಣು ಅವರದು ದ್ವಿಪಾತ್ರ ಆದರೆ ಈ ಚಿತ್ರದಲ್ಲಿ ತಂದೆ ಮಗನ ಪಾತ್ರದಲ್ಲಿ ವಿಷ್ಣು ಕಾಣಿಸಲಿದ್ದಾರೆ. ಜೂನ್-ಜುಲೈ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ.

'ದೊಡ್ಮನುಷ್ಯ' ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ 'ಮರ್ಯದೆ' ಚಿತ್ರದ ರೀಮೇಕ್. ವಿಜಯಕಾಂತ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ತಮಿಳು ಚಿತ್ರವನ್ನು ವಿಕ್ರಮನ್ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಮೀರಾ ಜಾಸ್ಮಿನ್, ಅಂಬಿಕಾ ಮುಖ್ಯ ಭೂಮಿಕೆಯಲ್ಲಿರುವ ಮರ್ಯಾದೆ ಚಿತ್ರ ಏಪ್ರಿಲ್ ನಲ್ಲಿ ತೆರೆಕಾಣಲಿದೆ. ನಂತರ ಕನ್ನಡದ 'ದೊಡ್ಮನುಷ್ಯ' ಚಿತ್ರೀಕರಣ ಆರಂಭವಾಗಲಿದೆ.

ದೊಡ್ಮನುಷ್ಯ ಚಿತ್ರದ ತೆರೆಯ ಹಿಂದಿನ, ಮುಂದಿನ ಕಲಾವಿದರ, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಈ ನಡುವೆ ವಿಷ್ಣುರ 197ನೇಚಿತ್ರ 'ನಂ ಯಜಮಾನ್ರು' ಈ ವಾರ ಬಿಡುಗಡೆಯಾಗುತ್ತಿದೆ. ಆಪ್ತಮಿತ್ರ ಚಿತ್ರದ ಮುಂದುವರೆದ ಭಾಗವಾಗಿ ವಿಷ್ಣರ 200ನೇ ಚಿತ್ರ 'ಆಪ್ತರಕ್ಷಕ' ಮಾರ್ಚ್ ಎರಡನೇ ವಾರದಲ್ಲಿ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು

ಸೆನ್ಸಾರ್ ಗೆ ರೆಡಿಯಾದ್ರು ನಂ ಯಜಮಾನ್ರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada