»   » ನವಗ್ರಹಗಳ ಕೃಪೆಗಾಗಿ ಹೊನ್ನಾವರಕ್ಕೆ ಬಂದ ಸಂಜಯದತ್

ನವಗ್ರಹಗಳ ಕೃಪೆಗಾಗಿ ಹೊನ್ನಾವರಕ್ಕೆ ಬಂದ ಸಂಜಯದತ್

Posted By: Staff
Subscribe to Filmibeat Kannada
Sanjay Datt
ಸಿರ್ಸಿ, ಸೆಪ್ಟೆಂಬರ್ 24 : ಬಾಲಿವುಡ್ ನಟ ಸಂಜಯ ದತ್ ಸೋಮವಾರ(ಸೆ.24) ನವಗ್ರಹ ಮತ್ತು ಗಣ ಹೋಮವನ್ನು ಹೊನ್ನಾವರದಲ್ಲಿ  ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ರಾಯಲ್ಕೇರಿಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ತನಕ ಅವರು ಹೋಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಂಕಷ್ಟಗಳ ನಿವಾರಣೆಗಾಗಿ ಹೋಮ ಮಾಡಲಾಗಿದೆ. ಇಬ್ಬರು ಆಪ್ತರ ಜೊತೆ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಇದು ವೈಯಕ್ತಿಕ ಕಾರ್ಯವಾಗಿದ್ದು, ಯಾರಿಗೂ ಅಲ್ಲಿ ಪ್ರವೇಶ ಇರಲಿಲ್ಲ.

ಹೋಮ ಪೂರ್ಣವಾದ ಮೇಲೆ ಪುರೋಹಿತರ ಮನೆಯಲ್ಲಿಯೇ ಊಟ ಮುಗಿಸಿ, ಸಂಜಯ್ ಗೋವಾಗೆ ತೆರಳಿದರು. ಅಲ್ಲಿಂದ ಮುಂಬೈ ವಿಮಾನ ಹತ್ತಲಿದ್ದಾರೆ. ಸಂಜಯ ದತ್ ನೋಡಲು ಅಪಾರ ಅಭಿಮಾನಿಗಳು ಹೊರಗಡೆ ನೆರೆದಿದ್ದರು. 1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 6ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. 

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada