For Quick Alerts
  ALLOW NOTIFICATIONS  
  For Daily Alerts

  ಕೆಎಂಎಫ್ ಹಾಲಿಗೆ ಹಾಲುಗಲ್ಲದ ರಾಗಿಣಿ ರಾಯಭಾರಿ

  By Rajendra
  |

  ಕರ್ನಾಟಕ ಹಾಲು ಮಹಾ ಮಂಡಲದ(ಕೆಎಂಎಫ್) ಪ್ರಮುಖ ಉತ್ಪನ್ನ 'ಸ್ಲಿಮ್' (slim) ಹಾಲಿನ ಪ್ರಚಾರ ರಾಯಭಾರಿಯಾಗಿ ಸಿನಿಮಾ ತಾರೆ ರಾಗಿಣಿ ದ್ವಿವೇದಿ ಆಯ್ಕೆಯಾಗಿದ್ದಾರೆ. ಕೆಎಂಎಫ್ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ರಾಗಿಣಿ ಪ್ರತಿಕ್ರಿಯಿಸಿದ್ದಾರೆ.

  ಶೀಘ್ರದಲ್ಲೇ ಹೊಸ ರಾಯಭಾರಿ ರಾಗಿಣಿ ಜೊತೆ Slim ಹಾಲಿನ ಜಾಹೀರಾತು ಚಿತ್ರೀಕರಣ ನಡೆಯಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಈಗಾಗಲೆ ಕಾರ್ಯನಿರ್ವಹಿಸುತ್ತಿದ್ದಾರೆ.

  ವರನಟ ಡಾ.ರಾಜ್ ಕುಮಾರ್ ಅವರು ಕೆಎಂಎಫ್ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿದ್ದರು. ಅನ್ನದಾತರ ಪರವಾಗಿ ಅಣ್ಣಾವ್ರು ನಯಾಪೈಸೆ ತೆಗೆದುಕೊಳ್ಳದೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅದೇ ದಾರಿಯಲ್ಲಿ ಪುನೀತ್ ಕೂಡ ಹೆಜ್ಜೆ ಹಾಕುತ್ತಿದ್ದಾರೆ.

  ತನ್ನ ವೈವಿಧ್ಯಭರಿತ ಸ್ವಾಧಿಷ್ಟಉತ್ಪನ್ನಗಳಿಂದ ಕೆಎಂಎಫ್ ನಾಡಿನಾದ್ಯಂತ ಹೆಸರಾಗಿದೆ.ಮುಂಬರುವ ದಿನಗಳಲ್ಲಿ ಕೆಎಂಎಫ್ ಚಾಕೋಲೇಟ್‌ಗಳಿಗೆ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಅವರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ್. [ನಂದಿನಿ ಹಾಲು]

  English summary
  Kannada films bubbly actress Ragini Dwivedi has joined as the brand ambassador of Karnataka Milk Federation (KMF) 'Slim' milk. She expressed her happiness to becoming a part of the KMF products. Soon the ad will be shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X