»   »  ರ‌್ಯಾಂಪ್ ಮೇಲೆ ಅನು ಪ್ರಭಾಕರ್ ಬಿಂದಾಸ್ ನಡಿಗೆ!

ರ‌್ಯಾಂಪ್ ಮೇಲೆ ಅನು ಪ್ರಭಾಕರ್ ಬಿಂದಾಸ್ ನಡಿಗೆ!

Subscribe to Filmibeat Kannada

ಸೀರೆಯುಟ್ಟ ಈ ನೀರೆ ಯಾರು ಎಂದು ಯೋಚಿಸುತ್ತಿದ್ದೀರಾ? ಈ ಮೋಹಕ ಭಾರತೀಯ ನಾರಿ ಮತ್ತಿನ್ಯಾರಿರಲಿಕ್ಕೆ ಸಾಧ್ಯ. 'ಅಭಿನಯ ಸರಸ್ವತಿ' ಎಂದೇ ಬಿರುದಾಂಕಿತರಾದ ಅನು ಪ್ರಭಾಕರ್. ಸೀರೆಯುಟ್ಟು ರ‌್ಯಾಂಪ್ ಮೇಲೆ ನಡೆಯುತ್ತಿದ್ದರೆ ಎಲ್ಲರೂ ಕಣ್ಣೆವೆ ಮಿಟುಕಿಸದೆ ನೋಡುತ್ತಿದ್ದರು.

ಬ್ಲೆಂಡರ್ಸ್ ಪ್ರೈಡ್ ಬೆಂಗಳೂರು ಫ್ಯಾಷನ್ ವೀಕ್ ನಲ್ಲಿ ಕೇಸರಿ ಮಿಶ್ರಿತ ಗುಲಾಬಿ ವರ್ಣದ ಸೀರೆಯುಟ್ಟು ನೆರೆದಿದ್ದವರನ್ನು ಅನು ಪ್ರಭಾಕರ್ ಸಮ್ಮೋಹನಗೊಳಿಸಿದರು.ಜಿ ನಮ್ರತಾ ವಿನ್ಯಾಸಗೊಳಿಸಿರುವ ಈ ಸೀರೆ ಅನು ಪ್ರಭಾಕರ್ ಗೆ ಹೇಳಿ ಮಾಡಿಸಿದಂತಿತ್ತು.

ಸೀರೆಯಲ್ಲಿನ ಹೂವಿನ ಚಿತ್ತಾರ, ಬಣ್ಣಗಳ ಬಳಕೆ, ಸೆರಗಿನ ಅಂದಚೆಂದಕ್ಕೆ ಸ್ವತಃ ಅನು ಪ್ರಭಾಕರ್ ಬೆರಗಾಗಿದ್ದರು. ''ರ‌್ಯಾಂಪ್ ಮೇಲೆ ನಡೆದ ಅನುಭವ ರೋಮಾಂಚಕವಾಗಿತ್ತು. ಇದೊಂದು ನಿಜಕ್ಕೂ ವಿಭಿನ್ನ ಅನುಭವ. ರ‌್ಯಾಂಪ್ ಮೇಲೆ ನಡೆಯುತ್ತಿರಬೇಕಾದರೆ ಎಲ್ಲರ ಕಣ್ಣು ನಮ್ಮತ್ತಲೇ ಇರುತ್ತದೆ. ನಿಜಕ್ಕೂ ಮರೆಯಲಾಗದ ಘಟನೆ ಎನ್ನುತ್ತಾರೆ ಅನು ಪ್ರಭಾಕರ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...