»   » 'ಮುಂಗಾರುಮಳೆ' ದಾಖಲೆಯತ್ತ 'ಆಪ್ತರಕ್ಷಕ'?

'ಮುಂಗಾರುಮಳೆ' ದಾಖಲೆಯತ್ತ 'ಆಪ್ತರಕ್ಷಕ'?

Posted By:
Subscribe to Filmibeat Kannada

ಫೆಬ್ರವರಿ 19ರಂದು ಬಿಡುಗಡೆಯಾದ 'ಆಪ್ತರಕ್ಷಕ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಕರ್ನಾಟಕದಾದ್ಯಂತ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತರಕ್ಷಕ' ಸರಿಸುಮಾರು 120 ತೆರೆಗಳ ಮೇಲೆ ಘರ್ಜಿಸುತ್ತಿದ್ದು ಬಾಕ್ಸಾಫೀಸಲ್ಲಿ ಹಣದ ಸುರಿಮಳೆಯಾಗುತ್ತ್ತಿದೆ.

ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ರು.5 ಕೋಟಿ ಗಳಿಸಿದೆ ಎನ್ನುತ್ತವೆ ಮೂಲಗಳು. ಇದು ಹೀಗೆ ಮುಂದುವರಿದರೆ 'ಆಪ್ತರಕ್ಷಕ' ಶತದಿನೋತ್ಸವ ವೇಳೆಗೆ ರು.40 ಕೋಟಿ ಬಾಚಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಗಳಿಕೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟರೆ 'ಮುಂಗಾರು ಮಳೆ' ದಾಖಲೆಯನ್ನು 'ಆಪ್ತರಕ್ಷಕ' ಅಳಿಸಿ ಹಾಕುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

'ಆಪ್ತರಕ್ಷಕ' ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೆ ಚಿತ್ರದ ನಿರ್ದೇಶಕ ಪಿ ವಾಸು ಹೊಸ ದೃಶ್ಯಗಳನ್ನು ಸೇರಿಸಿದ್ದಾರೆ. ವಿಜಯರಾಜ ಬಹದ್ದೂರ್ (ವಿಷ್ಣುವರ್ಧನ್) ಮತ್ತು ನಾಗವಲ್ಲಿ (ವಿಮಲಾ ರಾಮನ್) ನಡುವಿನ 125 ವರ್ಷಗಳಷ್ಟು ಹಳೆಯ ವೈಷಮ್ಯವನ್ನು ಇನ್ನಷ್ಟು ವಿಸ್ತಾರವಾಗಿ ತೋರಿಸಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada