»   »  ಬಿ ಸಿ ಪಾಟೀಲರ 'ಸೆಲ್ಯೂಟ್' ಗೆ ಹಿನ್ನೆಲೆ ಸಂಗೀತ

ಬಿ ಸಿ ಪಾಟೀಲರ 'ಸೆಲ್ಯೂಟ್' ಗೆ ಹಿನ್ನೆಲೆ ಸಂಗೀತ

Subscribe to Filmibeat Kannada
B C Patil
'ಸೆಲ್ಯೂಟ್ 'ಚಿತ್ರಕ್ಕೆ ನಗರದ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಾಯಕರೂ ಆದ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.ಪೊಲೀಸ್ ಅಧಿಕಾರಿಯಾಗಿ, ಜನರ ಬೆಂಬಲದಿಂದ ಶಾಸಕರಾದ ಪಾಟೀಲ್ ಅವರು ಪೊಲೀಸ್ ವೃತ್ತಿಗೆ ಸಂಬಂಧಿಸಿದ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಅವರ ವೃತ್ತಿ ಜೀವನದಲ್ಲಿ ನಡೆದ ಅನೇಕ ಘಟನೆಗಳು ಅಡಕವಾಗಿದೆ ಎಂದಿದ್ದಾರೆ.

ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅಶ್ವಿನಿ ಕೂಡ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಹಾಗೂ ಪ್ರಥಮ ಬಾರಿಗೆ ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ನೈಸ್ ಕಂಪನಿಯ ಮಾಲೀಕ ಅಶೋಕ್ ಖೇಣಿ 'ಸೆಲ್ಯೂಟ್" ನಲ್ಲಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡರೆ, ಯುವ ಪ್ರತಿಭೆ ವಿಜಯ್ ಕೌಂಡಿನ್ಯ ಖಳನಟನ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಬಿ.ವಿ.ರಾಧ, ಶೋಭರಾಜ್, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್ ಮುಂತಾದ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಸರಾಗವಾಗಿ ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾಯಿತು. ನಂತರ ರಾಜ್ಯದಲ್ಲಿ ಚುನಾವಣೆ ನಡೆದುದ್ದರಿಂದ ಉಳಿದ ಪ್ರಕ್ರಿಯೆಗಳು ಸ್ವಲ್ಪ ವಿಳಂಬವಾಯಿತು ಎಂದ ಬಿ.ಸಿ.ಪಾಟೀಲ್ ಅವರು ಜೂನ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನ 'ಸೆಲ್ಯೂಟ್ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada