»   »  ತಿರುಪತಿಗೆ ಕಾಲ್ನಡಿಗೆಯಲ್ಲಿ ಪಾಟೀಲ್ ಯಾತ್ರೆ!

ತಿರುಪತಿಗೆ ಕಾಲ್ನಡಿಗೆಯಲ್ಲಿ ಪಾಟೀಲ್ ಯಾತ್ರೆ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಹೊಸ ಸಾಹಕ್ಕೆ ಕೈಹಾಕಿದ್ದಾರೆ. ಗಿರೀಶ್ ಕಾಸರವಳ್ಳಿ ಅವರೊಂದಿಗೆ 'ಕನಸೆಂಬ ಕುದುರೆಯನೇರಿ' ಚಿತ್ರ ನಿರ್ಮಿಸುತ್ತಿದ್ದಾರಲ್ಲಾ. ಈಗ ಮತ್ತೊಂದು ಚಿತ್ರ ನಿರ್ಮಿಸುತ್ತಾರಾ ಹೇಗೆ ಎಂದು ಕೇಳಬೇಡಿ! ಈಗವರು ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಹೋರಟಿದ್ದಾರೆ.

ಇದನ್ನು ಅವರು ಯಾವುದೇ ಚಿತ್ರದ ಯಶಸ್ವಿಗಾಗಿ ಮಾಡುತ್ತಿಲ್ಲ. ಅವರ ತಾಯಿ ತುಳಸಿಬಾಯಿ ಪಾಟೀಲರು ದೈವಾದೀನರಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯ ತಿಥಿಗಾಗಿ ಬಸಂತಕುಮಾರ್ ಪಾಟೀಲ್ ಅವರು ತಿರುಪತಿಗೆ ಕಾಲ್ನಡಿಗೆ ಯಾತ್ರೆ ಮಾಡುತ್ತಿದ್ದಾರೆ.

ದಿನವೊಂದಕ್ಕೆ 40 ಕಿ.ಮೀ ಸವೆಸಿ ಸೆಪ್ಟೆಂಬರ್ 25ಕ್ಕೆ ಅವರು ತಿರುಪತಿ ತಲುಪುತ್ತಾರೆ. ಅವರ ಕುಟುಂಬದ ಇತರೆ ಸದಸ್ಯರು ಶನಿವಾರ (ಸೆ.26)ತಿರುಪತಿ ತಿಮ್ಮಪ್ಪನ ಬೆಟ್ಟದಲ್ಲಿ ಪಾಟೀಲರನ್ನು ಬರಮಾಡಿಕೊಳ್ಳಲಿದ್ದಾರೆ. ಅಬ್ಬಾಯಿ ನಾಯ್ಡು ಅವರು ಪ್ರತಿ ವರ್ಷ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಂತೆ.ಇರಲಿ, ತಿರುಪತಿಯಿಂದ ಪಾಟೀಲರು ಕ್ಷೇಮವಾಗಿ ಹಿಂತಿರುಗಲಿ ಎಂದು ಹಾರೈಸೋಣ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada