»   »  ದಯಾಳ್ ಕದ್ದು ಮುಚ್ಚಿ ಸಿನಿಮಾ ಮಾಡುತ್ತಿದ್ದಾರೆ!

ದಯಾಳ್ ಕದ್ದು ಮುಚ್ಚಿ ಸಿನಿಮಾ ಮಾಡುತ್ತಿದ್ದಾರೆ!

Subscribe to Filmibeat Kannada
Dayal Padmanabhan
ನಿರ್ಮಾಪಕ, ನಿರ್ದೇಶಕ ದಯಾಳ್ ಪದ್ಮನಾಭನ್ 'ಕದ್ದುಮುಚ್ಚಿ' ಚಿತ್ರಮಾಡುತ್ತಿದ್ದಾರೆ. ಕದ್ದುಮುಚ್ಚಿ ಚಿತ್ರ ಮಾಡುವ ಅಗತ್ಯವಾದರೂ ಏನಿತ್ತು ಎಂದು ಮಾತ್ರ ಕೇಳಬೇಡಿ. ಏಕೆಂದರೆ, ಚಿತ್ರದ ಹೆಸರೇ ಕದ್ದುಮುಚ್ಚಿ!

ಕದ್ದುಮುಚ್ಚಿ ಚಿತ್ರಕ್ಕೆ ಮೇ ತಿಂಗಳಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 27ರ ಉಗಾದಿ ಹಬ್ಬದ ದಿನ ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭಿಸಲು ದಯಾಳ್ ಸರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕದ್ದು ಮುಚ್ಚಿ ಆಟವಾಡಲು ದಯಾಳ್ ಹೊಸ ಮುಖಗಳಿಗಾಗಿ ಬಲೆ ಬೀಸಿದ್ದಾರೆ.

ಅರಮನೆ, ರಾಕಿ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಸಂಭಾವ್ಯ ನಾಯಕರ ಪಟ್ಟಿಯಲ್ಲಿದ್ದಾರೆ. ಈಗಾಗಲೇ ಸಂತೋಷ್ ರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆಯೂ ಮುಗಿಸಿದ್ದಾರೆ. ನಾಯಕಿಯರ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಸದ್ಯದ ಹಾಟ್ ಬೇಬ್ ಅಂದ್ರಿತಾ ರೇ, ನಿಧಿ ಸುಬ್ಬಯ್ಯ ಸೇರಿದಂತೆ ಇನ್ನೊಂದಿಬ್ಬರು ಸ್ಥಾನ ಪಡೆದಿದ್ದಾರೆ. ಸಂಗೀತ ನಿರ್ದೇಶಕರಾಗಿ ಸ್ಟೀಫನ್ ಆಯ್ಕೆಯಾಗಿದ್ದಾರೆ. ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಕದ್ದುಮುಚ್ಚಿ ನಡೆಯುತ್ತಿದೆ!

ಸರ್ಕಸ್; ಒಂದೂಕಾಲು ಕೋಟಿ ನಷ್ಟ
ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸರ್ಕಸ್ ಚಿತ್ರ ಗೋತಾ ಹೊಡೆದು ದಯಾಳ್ ಗೆ ತುಂಬಲಾರದ ನಷ್ಟ ಆಗಿದೆಯಂತೆ. ಸುಮಾರು ಒಂದೂ ಕಾಲು ಕೋಟಿ ರು.ಗಳು ಎಂಬುದು ಅವರ ಲೆಕ್ಕಾಚಾರ. ಶಿವಮೊಗ್ಗ, ಮಂಗಳೂರಿನಲ್ಲಿ ಗಳಿಕೆಯಲ್ಲಿ ಮುಂದಿದ್ದ ಸರ್ಕಸ್ ಚಿತ್ರ ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಮುಗ್ಗರಿಸಿ ಬಿತ್ತಂತೆ. ಬೆಂಗಳೂರು ಪರವಾಗಿರಲಿಲ್ಲ ಎಂದು ದಯಾಳ್ ಹೇಳುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕೆಎಫ್‌ಸಿಸಿ ಎದಿರು ನಡೆಯದ ದಯಾಳ್ 'ಸರ್ಕಸ್'
ಸರ್ಕಸ್‌ನಲ್ಲಿ ಸಖತ್ತಾಗಿ 'ರೈಲು' ಬಿಟ್ಟಿರುವ ದಯಾಳ್
ರಜನಿ ಪುತ್ರಿಯ ಗಮನ ಸೆಳೆದ ದಯಾಳ್ ಸರ್ಕಸ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada