»   » ಹಲವು ವಿಶೇಷಗಳ ಸರಮಾಲೆ 'ಸ್ಕೂಲ್ ಮಾಸ್ಟರ್'

ಹಲವು ವಿಶೇಷಗಳ ಸರಮಾಲೆ 'ಸ್ಕೂಲ್ ಮಾಸ್ಟರ್'

Subscribe to Filmibeat Kannada

ಗೋಲ್ಡನ್ ಲಯನ್ ಫಿಲಂ ಡಿವಿಜನ್ ಅವರ 'ಸ್ಕೂಲ್ ಮಾಸ್ಟರ್' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಕಾರ್ಯ ನಡೆಯುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಖ್ಯಾತ ನಿರ್ದೇಶಕ ದಿನೇಶ್‌ಬಾಬು ನಿರ್ದೇಶನದ ಈ ಚಿತ್ರ 'ಮಾಸ್ಟರ್ ಎಂದು ಪ್ರಾರಂಭವಾಗಿ ನಂತರ 'ಸ್ಕೂಲ್ ಮಾಸ್ಟರ್ ಎಂದು ಕರೆಯಲ್ಪಡುತ್ತಿದೆ.

ಹಲವು ವರ್ಷಗಳ ಹಿಂದೆ ಇದೇ ಶೀರ್ಷಿಕೆಯ ಚಿತ್ರ ಬಂದಿತಾದರೂ, ಅಲ್ಲಿನ ಕತೆಗೂ ನಮ್ಮ ಸಿನೆಮಾಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕರು. ಹಿಂದೆ 'ಒರಟ ಐ ಲವ್ ಯು ಚಿತ್ರವನ್ನು ನಿರ್ಮಿಸಿದ್ದ ಸಿ.ಮನೋಹರ್ ಈ ಚಿತ್ರದ ನಿರ್ಮಾಪಕರು. ಸದ್ಯದಲ್ಲೇ ಬಿಡುಗಡೆಯಾಗಲು ಸಿದ್ದವಾಗುತ್ತಿರುವ 'ಸ್ಕೂಲ್ ಮಾಸ್ಟರ್' ಹಲವು ವಿಶೇಷಗಳ ಸರಮಾಲೆ ಕೂಡ.

ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ 'ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ. ಡಾ:ವಿಷ್ಣುವರ್ಧನ್, ಸುಹಾಸಿನಿ ಅವರ ಅನುಪಮಜೋಡಿ ಚಿತ್ರದ ಉಳಿದ ತಾರಾಬಳಗದಲ್ಲಿ ದೇವರಾಜ್, ಅವಿನಾಶ್, ಮುಖೇಶ್‌ರಿಷಿ, ಬೇಬಿ ಬೃಂದಾ, ಬೇಬಿ ಪ್ರೇರಣ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada