»   » ದುನಿಯಾ ವಿಜಯ್ ಭೀಮಾ ತೀರದಲ್ಲಿ ಬಿಡುಗಡೆಗೆ ರೆಡಿ

ದುನಿಯಾ ವಿಜಯ್ ಭೀಮಾ ತೀರದಲ್ಲಿ ಬಿಡುಗಡೆಗೆ ರೆಡಿ

Posted By:
Subscribe to Filmibeat Kannada

ಬಹಳಷ್ಟು ಕುತೂಹಲ ಕೆರಳಿಸಿರುವ ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಮಾರ್ಚ್ 16ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ತಿಳಿಸಿದ್ದಾರೆ. ಓಂ ಪ್ರಕಾಶ್ ರಾವ್ ಅವರ ಮತ್ತೊಂದು ಮಾಸ್ ಎಂಟರ್‌ಟೈನ್‌ಮೆಂಟ್ ಚಿತ್ರ ಇದಾಗಿದೆ.

ಈ ಚಿತ್ರದ ವಿಶಾಲ ಕರ್ನಾಟಕದ ವಿತರಣೆ ಹಕ್ಕುಗಳನ್ನು ಸಮರ್ಥ ಪ್ರಸಾದ್ ಅವರು ಪಡೆದಿದ್ದಾರೆ. ಕಂಠೀರವ ಸ್ಟುಡಿಯೋದ ಅಧ್ಯಕ್ಷರಾದ ರುದ್ರೇಶ್ ಅವರು ಅರ್ಪಿಸುತ್ತಿರುವ ಚಿತ್ರದ ನಾಯಕಿ ಪ್ರಣೀತಾ. ಈಗಾಗಲೆ ದುನಿಯಾ ವಿಜಯ್ ಜೊತೆ 'ಜರಾಸಂಧ' ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಾತ್ರರಾಗಿರುವುದು ಗೊತ್ತೇ ಇದೆ.

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ದುಸ್ವಪ್ನವಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಚಂದಪ್ಪ ಹರಿಜನ ಜೀವನದ ಮೇಲೆ ಚಿತ್ರ ಬೆಳಕು ಬೀರಲಿದೆ. ಸಾಕಷ್ಟು ಕಸರತ್ತು ಮಾಡಿ ಚಿತ್ರಕತೆಯನ್ನು ಸಿದ್ಧಪಡಿಸಿದ್ದಾಗಿ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ. ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸಿರುವುದು ಚಿತ್ರದ ಮತ್ತೊಂದು ವಿಶೇಷ. (ಏಜೆನ್ಸೀಸ್)

English summary
Duniya Vijay and Praneetha lead Kannada movie Bheema Theeradalli all set to release on 16th March, 2012. Om Prakash Rao directed movie which deals with a notorious gangster Chandappa Harijana.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X