»   » ಏನೋ ಒಂಥರಾ ಅನ್ನುವ ಗಣೇಶ್, ಪ್ರಿಯಾ

ಏನೋ ಒಂಥರಾ ಅನ್ನುವ ಗಣೇಶ್, ಪ್ರಿಯಾ

Posted By:
Subscribe to Filmibeat Kannada

ದೆಹಲಿಯಲ್ಲಿ ಸುಮಾರು 90 ಜನ ಸಹ ನರ್ತಕಿಯರೊಡನೆ ಕುಣಿದು ಕುಪ್ಪಳಿಸಿ ಸುಸ್ತಾದ 'ಏನೋ ಒಂಥರಾ' ತಂಡ ಮರಳಿ ಬೆಂಗಳೂರು ತಲುಪಿದೆ. ಗಣೇಶ್ ಹಾಗೂ ಪ್ರಿಯಾಮಣಿ ಇರುವ ಕೆಲವು ದೃಶ್ಯಗಳನ್ನು ಅದ್ಭುತವಾಗಿ ಬಂದಿದೆ ಎನ್ನುತ್ತಾ ತಮ್ಮ ಗಡ್ಡ ನೀವಿಕೊಂಡರು 'ಮುಸ್ಸಂಜೆ ಮಾತು' ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್.

ಚಿತ್ರೀಕರಣ ಈಗಾಗಲೇ ಶೇ. 80 ಭಾಗ ಮುಗಿದಿದೆ. ಒಂದೆರೆಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ಚಿಕ್ಕಮಗಳೂರು ಹಾಗೂ ಗ್ರೀಸ್ ನ ಸುಂದರ ಪರಿಸರದಲ್ಲಿ ಗಣೇಶ್ ಹಾಗೂ ಪ್ರಿಯಾಮಣಿ ಹೆಜ್ಜೆ ಹಾಕಲಿದ್ದಾರೆ ಎನ್ನುತ್ತಾರೆ ಮಹೇಶ್. ಎಲ್ಲಾ ಓಕೆ ರಿಮೇಕ್ ಯಾಕ್ರಿ ಅಂದ್ರೆ, ಚಿತ್ರದ ಸಬ್ಜೆಕ್ಟ್ ಗಣೇಶ್ ಆವರ ಕ್ಯಾರೆಕ್ಟರ್ ಗೆ ಚೆನ್ನಾಗಿ ಸೂಟ್ ಆಗುತ್ತೆ. ಯಾವ ಚಿತ್ರವಾದರೂ ಗಣೇಶ್ ಅವರು ಸ್ವಂತಿಕೆ ಮೆರೆಯುತ್ತಾರೆ ಎಂದು ನಿರ್ದೇಶಕರು ಪ್ರಮಾಣ ಪತ್ರ ನೀಡಿದರು.

ತಮಿಳಿನ ಸೂಪರ್ ಹಿಟ್ ಚಿತ್ರ 'ಖುಷಿ'ದ ನಕಲಾದ 'ಏನೋ ಒಂಥರಾದಲ್ಲಿ ತಮಿಳು ಮೂಲದ ಹಿನ್ನೆಲೆ ಸಂಗೀತವನ್ನೇ ಇಲ್ಲೂ ಬಳಸಿಕೊಳ್ಳಲಾಗುತ್ತಿದೆಯಂತೆ. ಕನ್ನಡದಲ್ಲಿ ರಿಮೇಕ್ ಸಾಂಗ್ ಗಳಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಒಂದಿಷ್ಟು ಹೊಸ ಪಾಲಿಷ್ ನೀಡುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಹಾಗೂ ಜ್ಯೋತಿಕಾ ನಟಿಸಿದ್ದ ಈ ಚಿತ್ರ ತೆಲುಗು, ಹಿಂದಿಗೆ ಡಬ್, ರಿಮೇಕ್ ಆಗಿ ಹಿಟ್ ಆಗಿತ್ತು. ಅದೇ ಹೆಸರನ್ನು ಕನ್ನಡದಲ್ಲಿ ಬಳಸಬಹುದಿತ್ತು ಆದರೆ, ಆ ಹೆಸರಿನಲ್ಲಿ ಈಗಾಗಲೇ ಸಿನಿಮಾ ತೆರೆಕಂಡಿರುವುದರಿಂದ, ಗಣೇಶ್ ಅವರ ಹುಡುಗಾಟ ಚಿತ್ರದ ಹಾಡಿನ ಸಾಲು 'ಏನೋ ಒಂಥರಾ' ವನ್ನು ಚಿತ್ರದ ಶೀರ್ಷಿಕೆಯಾಗಿ ಉಳಿಸಿಕೊಳ್ಳಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಜೈ ಜಗದೀಶ್, ಶರಣ್, ಶ್ರೀನಿವಾಸಮೂರ್ತಿ ಇದ್ದರೆ, ಪ್ರಿಯಾಮಣಿ ಜೊತೆಗೆ ವಿಜಯಲಕ್ಷ್ಮಿ ಸಿಂಗ್ , ತೇಜಸ್ವಿನಿ ಮುಂತಾದವರಿದ್ದಾರೆ. ರಾಮ್ ಚಿತ್ರದ ಯಶಸ್ಸಿನ ನಂತರ ಬೆಂಗಳೂರು ಹುಡುಗಿ ಪ್ರಿಯಾಮಣಿ ಮತ್ತೆ ಕನ್ನಡದ ಕಡೆ ವಾಲಿದ್ದಾರೆ. ಇದು ಶುಭ ಸೂಚನೆ. ಬೊಂಬಾಟ್, ಸಂಗಮ, ಸರ್ಕಸ್ ಹಳ್ಳ ಹಿಡಿದ ನಂತರ 'ಮಳೆಯಲಿ ಜೊತೆಯಲಿ' ಯಶಸ್ಸು ಕಂಡು ಕೊಂಚ ಹೆಚ್ಚಿನ ನಗುವನ್ನು ಕಂಡಿರುವ ಗಣೇಶ್ ಅವರ ಮುಖ, ಏನೋ ಒಂಥರಾ ಯಶಸ್ಸಿನಿಂದ ಇನ್ನಷ್ಟೂ ಹಿಗ್ಗಲಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada