»   » ದುರಂತ ಪ್ರೇಮಿಯಾಗಿ ಗೋಲ್ಡನ್ ಸ್ಟಾರ್ ರೋಮಿಯೋ

ದುರಂತ ಪ್ರೇಮಿಯಾಗಿ ಗೋಲ್ಡನ್ ಸ್ಟಾರ್ ರೋಮಿಯೋ

Posted By:
Subscribe to Filmibeat Kannada

ಇಬ್ಬರು ಪ್ರೇಮಿಗಳ ಮಧುರ ಕಾವ್ಯವೆ 'ರೋಮಿಯೋ'. ಜೀವನದಲ್ಲಿ ಗೊತ್ತು ಗುರಿ ಇಲ್ಲದ ಒಬ್ಬ ಹುಡುಗ, ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಬಹಳ ಕನಸು ಕಟ್ಟಿಕೊಂಡಿರುವ ಹುಡುಗಿಯನ್ನು ಪ್ರೀತಿಸುತ್ತಾನೆ. ಅವಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ.

ಅವರಿಬ್ಬರು ಬೇರ್ಪಡಿಸಲಾಗದಷ್ಟು ಹತ್ತಿರವಾಗುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ಎಂತಹ ಕಷ್ಟದ ಸನ್ನಿವೇಶದಲ್ಲೂ ಬಿಟ್ಟುಕೊಡಬಾರದೆಂದು ಆಣೆ ಮಾಡುತ್ತಾರೆ. ಹಠಾತ್ತನೆ ವಿಧಿ ಅವರ ವಿರುದ್ಧ ಸಾಗುತ್ತದೆ.ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿರುತ್ತಾರೆ. ಆದರೆ ಅವರ ಜೀವನ ಛಿದ್ರಗೊಳಿಸುವ ಘಟನೆ ಅವರನ್ನು ಬೇರೆ ಮಾಡುತ್ತದೆ.

ಕಡೆಗೆ ಈ ಪ್ರೇಮಿಗಳು ಒಂದಾಗುತ್ತಾರೋ ಅಥವಾ ಅವರಿಬ್ಬರನ್ನೂ ಬೇರೆ ಮಾಡಿದ ಕಹಿ ಸತ್ಯ ಉಳಿಯುತ್ತದೋ ಎಂಬ ಪ್ರಶ್ನೆಗೆ ಉತ್ತರವೇರೋಮಿಯೋ. ರೋಮಿಯೋ ಚಿತ್ರದ ಪ್ರೇಮಿಗಳಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಕಾಣಿಸಲಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಸಿಹಿ ಕಹಿ ಚಂದ್ರು ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ.

ಆಕ್ಷನ್ ಕಟ್ ಹೇಳುತ್ತಿರುವವರು ಪಿ ಸಿ ಶೇಖರ್. ಅರ್ಜುನ್ ಸಂಗೀತ, ವೈದಿ ಛಾಯಾಗ್ರಹಣ, ಕವಿರಾಜ್ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಚಿತ್ರವನ್ನು ರಮೇಶ್ ಕುಮಾರ್ ಪಿ ನಿರ್ಮಿಸುತ್ತಿದ್ದಾರೆ. ಡಾ.ಸುರೇಶ್ ರೆಡ್ಡಿ, ರಾಘವ ರೆಡ್ಡಿ ಸಹ ನಿರ್ಮಾಪಕರು. ಈ ಚಿತ್ರ ಹೋಟೇಲ್ ಅಶೋಕದಲ್ಲಿ ಬುಧವಾರ (ಆ.24) ಸೆಟ್ಟೇರಿತು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Golden Star Ganesh and actress Bhavana lead Kannada movie Romeo starts rolling. P.C Shekhar is the director of the movie. Rangayana Raghu, Sadhu Kokila, Avinash are in the cast. The movie is being produced by P Ramesh Kumar.
Please Wait while comments are loading...